logo
WhatsApp Image 2026-04-02 at 14.46.04.jpeg
hindalco everlast.jpeg

ಮಣ್ಣಿನ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ದುರಂತ : ಜಾನ್ ಡಿಸೋಜ

ಟ್ರೆಂಡಿಂಗ್
share whatsappshare facebookshare telegram
31 Oct 2021
post image

ಕುಂದಾಪುರ: ಇಂದಿನ ಪೀಳಿಗೆಯವರಿಗೆ ಮನೆಯಲ್ಲಿಯೇ ಗೂಡು ದೀಪ ಮಾಡುವುದು ಗೊತ್ತೇ ಇಲ್ಲ, ನಮ್ಮ ಮಣ್ಣಿನ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ದುರಂತ ಎಂದು ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಹೇಳಿದರು

ಭಾನುವಾರ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಕೊರ್ಗಿ ವಿಠಲ ಶೆಟ್ಟಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ ಕುಂಭಾಶಿ, ಜೀವಿ ಆರ್ಟ್ಸ್ ಗೋಪಾಡಿ, ಅನಂತ ಸ್ಕೂಲ್ ಫೈನ್ ಆರ್ಟ್ಸ್ ಆನೆಗುಡ್ಡೆ ಇವರ ಸಹಯೋಗದಲ್ಲಿ "ನಮ್ಮನಿ ಗೂಡ್ಡೀಪ 2021" ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಮೀಣ ಸಂಸ್ಕೃತಿಯ ಅನಾವರಣ ವಿದ್ಯಾರ್ಥಿಗಳಿಗಾಗಿ ಸಾಂಪ್ರದಾಯಿಕ ಶೈಲಿಯ ಗೂಡುದೀಪ ರಚನ ಪ್ರಾತ್ಯಕ್ಷತೆ ಹಾಗೂ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪುನರಪಿಯಾಗಿ ಜಗ್ಗತ್ತಿಗೆ ಒಳ್ಳೆಯ ದಿನಗಳು ಆರಂಭವಾಗಬೇಕಿದೆ. ಮೊನ್ನೆ ಶಾಲೆಗಳು ಪ್ರಾರಂಭವಾದಗ ಮಕ್ಕಳ ಉತ್ಸಾಹ ಕಂಡು ಖುಷಿಯಾಯಿತು. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ದೀಪಾವಳಿಯ ಸಮಯದಲ್ಲಿ ನಾವೆಲ್ಲರೂ ಬಾಲ್ಯದಲ್ಲಿ ಗೂಡುದೀಪ ಮಾಡುತ್ತಿದ್ದೇವು. ಐಸ್ ಕ್ಯಾಂಡಿಯ ಕಡ್ಡಿಗಳಿಂದ ವಿಶಿಷ್ಟ ಗೂಡುದೀಪ ರಚಿಸಿ ಖುಷಿ ಪಡುತ್ತಿದ್ದೇವು. ಆಗ ಜಾತಿ, ಧರ್ಮ ಅಡ್ಡ ಬರುತ್ತಿರಲಿಲ್ಲ. ಇವತ್ತಿನ ದಿನದಲ್ಲಿ ಮನೆಯಲ್ಲಿ ಗೂಡು ದೀಪ ನಿರ್ಮಿಸುವವರು ಅತೀ ವಿರಳ ಎಂದರು

ಮಕ್ಕಳ ಆಸಕ್ತಿಯ ವಿಚಾರಕ್ಕೆ ಪೋಷಕರು ಬೆಂಬಲ ನೀಡಬೇಕು. ಕಲೆ, ಸಾಹಿತ್ಯ, ನಾಟ್ಯ, ಯಕ್ಷಗಾನ ಕ್ಷೇತ್ರಗಳಿಗೆ ಯುವ ಪ್ರತಿಭೆಗಳನ್ನು ಕರೆತಂದು ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಕಲಾವಿದ ವಿಜೇಂದ್ರ ಆಚಾರ್ಯ ಮತ್ತು ಸಂಗಡಿಗರು ಹಾಗು ಸಭಾಂಗಣ ಮಾಲೀಕರಾದ ರವಿರಾಜ್ ಉಪಾಧ್ಯಾಯ ಉಪಸ್ಥಿತರಿದ್ದರು ಕೂರ್ಗಿ ವಿಠ್ಠಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ರಂಜಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರುa

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.