



ಮಂಗಳೂರು :ನೀರಿಗೆ ಬಿದ್ದ ಗೆಳೆಯನ ರಕ್ಷಣೆಗೆ ಇಳಿದ ಯುವಕನ ಸಹಿತ ಇಬ್ಬರು ನೀರುಪಾಲಾದ ಘಟನೆಯು ನಗರದ ಹೊರವಲಯದ ಪಡೀಲ್ ಬಳಿಯ ಅಳಪೆ ಪಡ್ಪು ಎಂಬಲ್ಲಿ ನಡೆದಿದೆ.
ಮೃತ ಯುವಕರನ್ನು ಅಳಪೆ ಪಡುರೆಂಜ ನಿವಾಸಿ ವರುಣ್ (27) ಹಾಗೂ ಎಕ್ಕೂರು ನಿವಾಸಿ ವೀಕ್ಷಿತ್ (28) ಎಂದು ಗುರುತಿಸಲಾಗಿದೆ.
ಸಂಜೆ ವೇಳೆಗೆ ಗೆಳೆಯರೊಂದಿಗೆ ಕ್ರಿಕೆಟ್ ಆತವಾಡಲು ಬಂದಿದ್ದ ಸಂದರ್ಭ ರೈಲ್ವೇ ಹಳಿ ಪಕ್ಕದಲ್ಲಿರುವ ಹಳ್ಳದ ದಡದಲ್ಲಿ ಕುಳಿತಿದ್ದ ಯುವಕರ ಪೈಕಿ ವರುಣ್ ಎಂಬಾತ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ಆತನ ರಕ್ಷಣೆಗೆ ವೀಕ್ಷಿತ್ ನೀರಿಗೆ ಧುಮುಕಿದ್ದ ಎನ್ನಲಾಗಿದೆ.
ಆದರೆ ಕೆರೆಯಲ್ಲಿ ಹೂಳು ತುಂಬಿದ್ದ ಹಿನ್ನೆಲೆಯಲ್ಲಿ ಈಜಾಡಲು ಸಾಧ್ಯವಾಗದೆ ಯುವಕರಿಬ್ಬರು ಉಸಿರು ಚೆಲ್ಲಿದ್ದು,ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಆಗಮಿಸಿದರಾದರೂ ಅದಾಗಲೇ ಯುವಕರಿಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.