



ಸುರಕ್ಷಾ ಪತ್ರಿಕೋಧ್ಯಮ ವಿಭಾಗ ಎಂ ಪಿ ಎಂ ಕಾಲೇಜು ಕಾರ್ಕಳ
ಅಕ್ಕ - ತಂಗಿಯ ನಡುವಿನ ಭಾಂದವ್ಯ ಬಲು ಸುಂದರ. ಸುಮಧುರವು ಹೌದು.. .
ತಂಗಿಯ ಕಷ್ಟವನ್ನು ನೀವಾರಿಸುವಲ್ಲಿ ಅಕ್ಕ ನಿರ್ವಹಿಸುವ ಒಂದು ಜವಾಬ್ದಾರಿ ಹಾಗೆಯೇ ಅವಳ ಮೇಲೆ ಇರುವ ಅಕ್ಕನ ಕಾಳಜಿಯಾಗಿರಬಹುದು ಇದನ್ನು ವಿವಾರಿಸಲು ಪದಗಳೇ ಸಾಲದು.
ಹಾಗೆಯೇ ಬಾಲ್ಯದಲ್ಲಿ ಇರುವಾಗ ಕಿತ್ತಾಟಗಳು ನಡೆಯುವುದು ಸಹಜವಾಗಿದೆ. ನಂತರ ಅವರು ದೊಡ್ಡದಾಗುತ್ತಾ ಹೋದಂತೆ ಅವರ ಆಲೋಚನೆಗಳು ಕೂಡ ಬದಲಾಗುತ್ತದೆ ಅವರು ಒಬ್ಬರನ್ನು ಒಬ್ಬರು ಬಿಟ್ಟಿರುವಾಗ ಅವರ ನಡುವೆ ಇರುವ ಪ್ರೀತಿ - ಕಾಳಜಿಯ ಭಾವನೆಗಳು ಉಕ್ಕಿ ಹರಿಯುತ್ತದೆ. ನನ್ನೆಲ್ಲಾ ನೋವು ನಲಿವುಗಳ್ಳಲ್ಲಿ ತಂಗಿಯೂ ಅಕ್ಕ ಜೊತೆಗಿರಬೇಕೆಂದು ಬಯಸುತ್ತಾಳೆ. ಹಾಗೆಯೇ ಅಕ್ಕನು ಕೂಡಾ ಯಾರಲ್ಲಿಯೂ ಹೇಳಲಾಗದೆ ಇರುವ ಕೆಲವು ವಿಚಾರ ಗಳನ್ನು ತನ್ನ ತಂಗಿಯಲ್ಲಿ ಹೇಳಿಕೊಂಡು ಸಮಾಧಾನ ಪಟ್ಟು ಕೊಳ್ಳುತ್ತಾಳೆ. ಅಕ್ಕನು ತನ್ನ ತಂಗಿಯ ಖುಷಿಯನ್ನು ಕಂಡು ಅದರಲ್ಲಿಯೇ ತನ್ನ ಖುಷಿಯನ್ನು ಕೂಡ ಕಂಡುಕೊಳ್ಳುತ್ತಾಳೆ. ಅಕ್ಕನು ತನ್ನ ತಂಗಿಗೆ ಯಾವುದೇ ರೀತಿಯ ಕಷ್ಟ ನೋವುಗಳು ಬರದಂತೆ ಕಾಪಾಡಿಕೊಳ್ಳುತ್ತಾಳೆ. ತನ್ನ ತಂಗಿಗೆ ಸಣ್ಣ ನೋವಾದರೂ ಕಷ್ಟ ಪಡುವ ಅಕ್ಕ, ಸಧಾ ಅಕ್ಕನ ಏಳಿಗೆಯನ್ನು ಬಯಸುವ ತಂಗಿ ಇದು ಒಂದು ಅವಿನಾಭಾವ ಸಂಭಂದವಾಗಿದೆ. ಮನೆಯಲ್ಲಿ ಹಿರಿಯ ಮಗಳಾಗಿ ಜನಿಸಿದವಳಿಗೆ ನಂತರದ ಮಗುವಿನಿಂದ ಅಕ್ಕಯೆಂದು ಕರೆಸಿಕೊಳ್ಳುವ ಭಾಗ್ಯದೊರಕುತ್ತದೆ. ಆ ಮಗುವನ್ನು ಎತ್ತಿ ಮುದ್ದಾಡುವ ಭಾಗ್ಯವೂ ಕೂಡಾ ದೊರಕುತ್ತದೆ. ಅಕ್ಕನ ಮದುವೆಯ ಸಂಧರ್ಭದಲ್ಲಿ ಆಕೆ ತಂಗಿಯನ್ನು ಬಿಟ್ಟು ಹೋಗುವ ಸಂಧರ್ಭ ಎದುರಾಗುತ್ತದೆ. ಇದೆಲ್ಲಾ ತಿಳಿದರು ಅಕ್ಕನ ಮದುವೆಯಲ್ಲಿ ನಗುನಗುತ್ತಾ ಓಡಾಡಾಬೇಕು ಎಂಬ ನಿರೀಕ್ಷೆಯಲ್ಲಿ ಗಟ್ಟಿ ಮನಸ್ಸನ್ನು ಮಾಡಿ ಓಡಾಡುವ ತಂಗಿಯೂ ಕೊನೆಗೆ ಅಕ್ಕ ಹೊರಡುವ ಸಂಧರ್ಭದಲ್ಲಿ ಅವಳನ್ನು ಬಿಗಿದಪ್ಪಿ ಜೋರಾಗಿ ಅತ್ತು ಬಿಡುತ್ತಾಳೆ. ಇದ್ದಕ್ಕೆ ಕಾರಣ ಅಕ್ಕ ತನ್ನ ತಂಗಿಗೆ ತೋರಿದ ತಾಯಿಯ ಪ್ರೀತಿ. ಕೆಲವೊಂದು ಸಂಧರ್ಭದಲ್ಲಿ ಕಣ್ಣ ಮುಂದೆ ಕಾಣಿಸಿಕೊಳ್ಳುತ್ತದೆ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಮದುವೆಯ ನಂತರ ಅಕ್ಕನಿಗೆ ಒಂದು ಮಗುವಾಗಲಿದೆ ಎಂಬ ಸಂಭ್ರಮ ಮಗುವನ್ನು ಎತ್ತಿ, ಮುದ್ದಾಡುವ ಅಸೆ ಕನಸುಗಳು. ಅಕ್ಕನಿಗೊಂದು ಮಗುವಾದ ಸಂಧರ್ಭದಲ್ಲಿ ಆ ಮಗುವು ತಂಗಿಯದವಳನ್ನು ಚಿಕ್ಕಮ್ಮಯೆಂದು ಕರೆಸಿಕೊಳ್ಳುವ ಒಂದು ಸುಂಧರವಾದ ಅನುಭವ. ಅಕ್ಕನು ನಂತರ ಅದೇ ಸಾಂಸಾರಿಕ ಜೀವನಕ್ಕೆ ಕಲಿಡಬೇಕಾದ ತಂಗಿಗೆ ಒಂದು ಒಳ್ಳೆಯ ಸ್ಪೂರ್ತಿಯಾಗುತ್ತಳೆ. ಆಕೆಯ ಸಹಾಯ ಮತ್ತು ಮಾರ್ಗದರ್ಶನ ಬದುಕಿನ ನೆಲೆಯಾಗಿರುತ್ತದೆ. ಈಗೀನ ಕಾಲದಲ್ಲಿ ಮನೆಗೆ ಒಂದೇ ಮಗು ಸಾಕು ಎಂಬುವುದರಿಂದ ಇದೆಲ್ಲಾ ಕಾಣಾ ಸಿಗುವುದು ತುಂಬಾ ಅಪರೂಪ. ಸ್ವಂತ ಅಕ್ಕ ತಂಗಿ ಇಲ್ಲದಿದ್ದರೇನಾಯಿತು ಬೇರೆಯವರೊಂದಿಗೆ ನಾವು ಇದೇ ಭಾಂಧವ್ಯಾದಿಂದ ಇರಬಹುದಾಗಿದೆ. ಒಟ್ಟಿನಲ್ಲಿ ಅಕ್ಕ -ತಂಗಿ ಎಂಬ ಸಂಬಂಧ ತುಂಬಾ ಅದ್ಭುತವಾಗಿದೆ. ಏಕೆಂದರೆ ನಾನು ಒಂದು ತುಂಟ ತಂಗಿಯನ್ನು ಪಡೆಯಲು ತುಂಬಾ ಅದೃಷ್ಟವನ್ನು ಮಾಡಿದ್ದೇನೆ. ನಾವು ಎಷ್ಟೇ ಜಗಳವಾಡಿದರು ಬೇರೆಯವರ ಮುಂದೆ ಒಬ್ಬರನ್ನು ಒಬ್ಬರು ಬಿಟ್ಟು ಕೊಡುವುದಿಲ್ಲ ಹಾಗೆಯೇ ಮದುವೆಯಾದ ನಂತರ ಒಬ್ಬರನ್ನೊಬ್ಬರು ತಿರಸ್ಕರಿಸದೇ ಹೊಂದಾಣಿಕೆಯಿಂದ ಇದ್ದು. ಎಲ್ಲಾ ರೀತಿಯ ಸಹಾಯವನ್ನು ಮಾಡಿಕೊಳ್ಳುತ್ತಾ ಸುಖವಾಗಿ ಬದುಕುವಂತೆ ಆ ದೇವರು ಅನುಗ್ರಹಿಸಿದರೆ ಸಾಕು. ಒಡಹುಟ್ಟಿದವಳೊಂದಿಗೆ ಒಡನಾಟದಿಂದಿರುವ ಭಾಗ್ಯ ಜೀವನದ ಉದ್ದಕ್ಕೂ ಅವಕಾಶ ಇರಲಿ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.