



ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕ ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡಿನದ್ದೆ ಸುದ್ದಿ ಹರಿದಾಡುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು, ಈ ಹಾಡಿನ ಬಗ್ಗೆ ನಾವೆಲ್ಲಾ ಎಷ್ಟು ಮಾತಾಡಿದರೂ ಕಡಿಮೆಯೇ ಅಂತ ಹೇಳಬಹುದು. ಏಕೆಂದರೆ ಎಲ್ಲರಿಗೂ ಗೊತ್ತಿರುವಂತೆ ಜಾಗತಿಕ ಮಟ್ಟದಲ್ಲಿ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಅವರು ‘ನಾಟು ನಾಟು’ ಹಾಡಿನಿಂದ ಮಿಂಚುತ್ತಿದ್ದಾರೆ ಅಂತ ಹೇಳಬಹುದು. ‘ನಾಟು ನಾಟು’ ಹಾಡು ಇವರಿಗೆ ತಂದು ಕೊಟ್ಟ ಕೀರ್ತಿ ಅಷ್ಟಿಷ್ಟಲ್ಲ ಬಿಡಿ, ಆಸ್ಕರ್ ಅಂತಹ ಪ್ರಶಸ್ತಿಯನ್ನೆ ಇವರಿಗೆ ತಂದು ಕೊಟ್ಟಿದ್ದು, ಇದರ ಮೂಲಕ ಇಡೀ ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದ್ದಾರೆ ಅಂತ ಹೇಳಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಈ ಹಾಡಿಗೆ ಸ್ಟೆಪ್ಸ್ ಹಾಕಿದ ಅನೇಕರ ವೀಡಿಯೋಗಳು ಹರಿದಾಡುತ್ತಿವೆ ಅಂತ ಹೇಳಬಹುದು. ಇದೀಗ, ಯುಎಸ್ ಪೊಲೀಸ್ ಅಧಿಕಾರಿಗಳು ಸಹ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ ನೋಡಿ. ಈ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ಆಸ್ಕರ್ ಸಮಾರಂಭಕ್ಕೆ ಮುಂಚಿತವಾಗಿಯೇ ಈ ವೀಡಿಯೋವನ್ನು ನೆನಾವತ್ ಜಗನ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಪ್ರಶಸ್ತಿ ಲಭಿಸಿದ ನಂತರ ಇದು ಸಾಕಷ್ಟು ಜನರ ಗಮನ ಸೆಳೆದಿದೆ ಅಂತ ಹೇಳಬಹುದು.
ಈ 44 ಸೆಕೆಂಡಿನ ವೀಡಿಯೋದಲ್ಲಿ, ಯುಎಸ್ ಪೊಲೀಸರು ಈ ಹಾಡಿಗೆ ಕಾಲು ಕುಲುಕುತ್ತಿರುವುದನ್ನು ಕಾಣಬಹುದು. ಅಲ್ಲೇ ಪಕ್ಕದಲ್ಲಿ ಜನರು ಬಣ್ಣ ಆಡುತ್ತಿರುವುದನ್ನು ಮತ್ತು ಗುಲಾಲ್ ಗಳನ್ನು ಹಿಡಿದುಕೊಂಡು ಹೋಳಿ ಆಡುತ್ತಿರುವುದನ್ನು ಸಹ ಈ ವೀಡಿಯೋದಲ್ಲಿ ನೋಡಬಹುದು. ಈ ವೀಡಿಯೋವನ್ನು ಬಹುಶಃ ಹೋಳಿ ಹಬ್ಬದ ದಿನದಂದು ತೆಗೆದುಕೊಳ್ಳಲಾಗಿದೆ ಎಂದು ತೋರುತ್ತದೆ. ಕ್ಲಿಪ್ ನಲ್ಲಿ ಒಬ್ಬ ವ್ಯಕ್ತಿಯು ಪೊಲೀಸರ ಭುಜದ ಮೇಲೆ ತನ್ನ ಕೈಗಳನ್ನು ಇರಿಸಿ, ಹಿನ್ನೆಲೆ ಸಂಗೀತ ಬರುತ್ತಿದ್ದಂತೆ ಹುಕ್ ಸ್ಟೆಪ್ಸ್ ಗಳನ್ನು ಹಾಕುತ್ತಾನೆ.
ಪೊಲೀಸರು ಸಹ ಆತನ ಜೊತೆಗೆ ಜನಪ್ರಿಯ ಹಾಡಿಗೆ ಸ್ಟೆಪ್ಸ್ ಹಾಕಲು ಶುರು ಮಾಡುತ್ತಾರೆ. ಈ ವೀಡಿಯೋವನ್ನು ಟೆಕ್ಸಾಸ್ ನಲ್ಲಿ ಸೆರೆಹಿಡಿಯಲಾಗಿದೆ ಎಂದು ಜಗನ್ ಉಲ್ಲೇಖಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.