logo
WhatsApp Image 2026-04-02 at 14.46.04.jpeg
hindalco everlast.jpeg

ಉಪ್ಪಿನ ಬಳಕೆಗೂ ಬಂತು ಮಹತ್ವದ ರೂಲ್ಸ್, ಉಪ್ಪು ಹೆಚ್ಚಾದ್ರೆ ಆಹಾರ ತಯಾರಿಕಾ ಸಂಸ್ಥೆಗಳ ಮೇಲೆ ಖಡಕ್ ಆಕ್ಷನ್,

ಟ್ರೆಂಡಿಂಗ್
share whatsappshare facebookshare telegram
29 Sept 2026
post image

ಬೆಂಗಳೂರು, ಸೆ.29: ರಾಜ್ಯದಲ್ಲಿ ರಕ್ತದೊತ್ತಡ ಹಾಗೂ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಉಪ್ಪಿನ ಬಳಕೆ ಮತ್ತು ಸೇವನೆ ಕಡಿಮೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಶಾಲಾ-ಕಾಲೇಜುಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಆಹಾರ ತಯಾರಿಕಾ ಸಂಸ್ಥೆಗಳಿಗೆ ಉಪ್ಪಿನ ಬಳಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವನೆ

ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಡುಗೆ ಮಾಡುವಾಗ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಉಪ್ಪಿನಕಾಯಿ, ಚಟ್ನಿ ಹಾಗೂ ಸ್ನ್ಯಾಕ್ಸ್ ತಯಾರಿಸುವಾಗಲೂ ಉಪ್ಪಿನ ಬಳಕೆಯನ್ನು ಮಿತಿಗೊಳಿಸುವಂತೆ ಸೂಚಿಸಲಾಗಿದೆ.

ಊಟ ಮಾಡುವ ಮೊದಲು ಆಹಾರದ ರುಚಿ ನೋಡದೆ ಹೆಚ್ಚುವರಿಯಾಗಿ ಉಪ್ಪು ಹಾಕುವ ಅಭ್ಯಾಸವನ್ನು ಬಿಡಬೇಕು. ಸಂಸ್ಕರಿಸಿದ, ಪ್ಯಾಕ್ ಮಾಡಿದ, ಇನ್‌ಸ್ಟಂಟ್ ಹಾಗೂ ರೆಡಿ-ಟು-ಈಟ್ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಡಿಮೆ ಉಪ್ಪಿನ ಅಭ್ಯಾಸ

ಪ್ಯಾಕ್ ಮಾಡಿದ ಆಹಾರ ಖರೀದಿಸುವಾಗ ಅದರ ಲೇಬಲ್‌ನಲ್ಲಿರುವ ಉಪ್ಪು ಮತ್ತು ಸೋಡಿಯಂ ಪ್ರಮಾಣವನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ತಾಜಾ ಹಾಗೂ ಕಡಿಮೆ ಸಂಸ್ಕರಿಸಿದ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವಂತೆ ಸಲಹೆ ನೀಡಲಾಗಿದೆ.

ಪೋಷಕರು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಕಡಿಮೆ ಉಪ್ಪಿನ ಆಹಾರ ಸೇವಿಸುವ ಅಭ್ಯಾಸ ಬೆಳೆಸಬೇಕು. ರಕ್ತದೊತ್ತಡ ಅಥವಾ ಇತರ ಆರೋಗ್ಯ ಸಮಸ್ಯೆ ಹೊಂದಿರುವವರು ಉಪ್ಪಿನ ಸೇವನೆ ಕಡಿಮೆ ಮಾಡುವ ಕುರಿತು ವೈದ್ಯರ ಸಲಹೆ ಪಡೆಯಬೇಕು. ಕಡಿಮೆ ಸೋಡಿಯಂ ಇರುವ ಉಪ್ಪಿನ ಬದಲಿ ಬಳಸುವಾಗ ಆಹಾರ ಸುರಕ್ಷತೆ ಹಾಗೂ ವೈದ್ಯಕೀಯ ಸಲಹೆಯನ್ನು ಪಾಲಿಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಕಿಡ್ನಿ ಕಾಯಿಲೆ ಇರುವವರು ವೈದ್ಯರ ಸಲಹೆಯಂತೆ ಉಪ್ಪಿನ ಸೇವನೆ ನಿಯಂತ್ರಿಸಬೇಕು.

ಉಪ್ಪು ತಯಾರಿಕಾ ಘಟಕಗಳಿಗೆ ಸೂಚನೆ

ಉಪ್ಪು ತಯಾರಿಕಾ ಸಂಸ್ಥೆಗಳು ಸರ್ಕಾರದ ಉಪ್ಪು ಕಡಿತದ ಪ್ರಯತ್ನಕ್ಕೆ ಸಹಕರಿಸುವಂತೆ ಸೂಚಿಸಲಾಗಿದೆ. ಕಡಿಮೆ ಸೋಡಿಯಂ ಅಥವಾ ಐಯೋಡೈಸ್ಡ್ ಲೋ-ಸೋಡಿಯಂ ಉಪ್ಪಿನ ಬದಲಿ ಉತ್ಪನ್ನಗಳ ತಯಾರಿಕೆಗೆ ಪ್ರಯತ್ನಿಸಬೇಕು. ಇಂತಹ ಉತ್ಪನ್ನಗಳು ಆಹಾರ ಸುರಕ್ಷತಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಉತ್ಪನ್ನದ ಸಂಯೋಜನೆ, ಬಳಕೆ ವಿಧಾನ ಹಾಗೂ ಮುನ್ನೆಚ್ಚರಿಕೆಗಳನ್ನು ಲೇಬಲ್‌ನಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಗುಣಮಟ್ಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಆರೋಗ್ಯ ಇಲಾಖೆ ಮತ್ತು FSSAI ಜತೆ ಸಹಕರಿಸುವಂತೆ ಸೂಚಿಸಲಾಗಿದೆ.

ಪ್ಯಾಕೇಜ್ಡ್ ಆಹಾರ ತಯಾರಕರಿಗೂ ಮಾರ್ಗಸೂಚಿ

ಆಹಾರ ಮತ್ತು ಪ್ಯಾಕೇಜ್ಡ್ ಫುಡ್ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಉಪ್ಪು ಹಾಗೂ ಸೋಡಿಯಂ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡುವಂತೆ ಸೂಚಿಸಲಾಗಿದೆ. ಆಹಾರದ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಧಕ್ಕೆ ಬಾರದಂತೆ ಉಪ್ಪಿನ ಪ್ರಮಾಣ ಕಡಿಮೆ ಮಾಡಬಹುದಾದ ಉತ್ಪನ್ನಗಳನ್ನು ಗುರುತಿಸಬೇಕು.

ತಾಂತ್ರಿಕವಾಗಿ ಸಾಧ್ಯವಿರುವ ಕಡೆಗಳಲ್ಲಿ ಸೋಡಿಯಂಗೆ ಪರ್ಯಾಯಗಳನ್ನು ಬಳಸಬೇಕು. ಉತ್ಪನ್ನದ ಪೌಷ್ಟಿಕಾಂಶದ ಮಾಹಿತಿಯನ್ನು ಲೇಬಲ್‌ನಲ್ಲಿ ಸ್ಪಷ್ಟವಾಗಿ ನಮೂದಿಸುವುದರ ಜೊತೆಗೆ FSSAI ಮಾನದಂಡಗಳನ್ನು ಪಾಲಿಸಬೇಕು.

ಶಾಲಾ-ಕಾಲೇಜುಗಳಿಗೂ ಸೂಚನೆ

ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಪದ್ಧತಿ ಹಾಗೂ ಉಪ್ಪಿನ ಸೇವನೆ ಕಡಿಮೆ ಮಾಡುವ ಕುರಿತು ಅರಿವು ಮೂಡಿಸಬೇಕು. ಶಾಲೆಗಳಲ್ಲಿ ನೀಡುವ ಊಟ ಮತ್ತು ಸ್ನ್ಯಾಕ್ಸ್‌ನಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದೆ.

ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಉಪ್ಪಿನ ಸೇವನೆ ಕಡಿಮೆ ಮಾಡುವ ಕುರಿತ ಸಂದೇಶವನ್ನು ಸೇರಿಸಬೇಕು. ಮನೆಯಲ್ಲಿ ಆರೋಗ್ಯಕರ ಆಹಾರ ಪದ್ಧತಿ ಬೆಳೆಸಲು ಪೋಷಕರಿಗೆ ಅರಿವು ಮೂಡಿಸುವುದರ ಜೊತೆಗೆ ಅಡುಗೆ ಸಿಬ್ಬಂದಿ ಹಾಗೂ ಆಹಾರ ನಿರ್ವಹಿಸುವ ಸಿಬ್ಬಂದಿಗೆ ಉಪ್ಪಿನ ಸರಿಯಾದ ಬಳಕೆಯ ಕುರಿತು ತರಬೇತಿ ನೀಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.