



ಡೆಹರಾಡೂನ್ : ಉತ್ತರಾಖಂಡ್‌ನ ಪವಿತ್ರ ತೀರ್ಥಕ್ಷೇತ್ರ ಯಮುನೋತ್ರಿ ದೇಗುಲಕ್ಕೆ ತೆರಳುವ ಮಾರ್ಗದ ಹೆದ್ದಾರಿಯಲ್ಲಿನ ತಡೆ ಗೋಡೆಯ ಒಂದು ಭಾಗ ಕುಸಿದಿದ್ದರಿಂದ ಸುಮಾರು 10,000 ಯಾತ್ರಾರ್ಥಿಗಳು ರಿಷಿಕೇಶ-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ ಸಿಲುಕಿದ್ದಾರೆ. ಬುಧವಾರ ಸುರಿದ ಭಾರಿ ಮಳೆಗೆ ಸಾಯನಚಟ್ಟಿ ಮತ್ತು ರಣಚಟ್ಟಿ ನಡುವಿನ ರಸ್ತೆ ಕೊಚ್ಚಿಹೋದ ಹಿನ್ನೆಲೆಯಲ್ಲಿ ಸುಮಾರು 24 ಗಂಟೆಗಳ ಕಾಲ ಮುಚ್ಚಲಾಗಿದ್ದ ಹೆದ್ದಾರಿಯನ್ನು ಗುರುವಾರ ಸಂಜೆ ಸಂಚಾರಕ್ಕೆ ತೆರೆಯಲಾಗಿತ್ತು. ಆದರೆ ತಡೆಗೋಡೆ ಕುಸಿತ ಸಂಭವಿಸಿದ್ದರಿಂದ ಶನಿವಾರ ಮತ್ತೆ ಹೆದ್ದಾರಿ ಸಂಚಾರ ಮುಚ್ಚಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.