



ಕಂಬಳ ಎನ್ನುವುದು ಜಾನಪದ ಕ್ರೀಡೆಯಾಗಿದ್ದು ಅತ್ಯಂತ ಜನಮನ್ನಣೆ ಯನ್ನು ಪಡೆದ ಜಾನಪದ ಕ್ರೀಡೆಯಾಗಿದೆ. ಯಾವುದೇ ಜಾತಿ ಮತ ಭೇದವಿಲ್ಲದ, ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲದ, ಕುಟುಂಬ ಸಮೇತರಾಗಿ ಬಂದು ನೋಡುವ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರುವ ಒಂದು ಜಾನಪದ ಕ್ರೀಡೆ ಎಂದರೆ ಅದು ಕಂಬಳ ಮಾತ್ರ ಇಂದಿಗೂ ಸಹ ಕಂಬಳ ಎಂದರೆ ಅದೇನು ಹುಮ್ಮಸ್ಸು ಎನ್ನುವ ರೀತಿಯಲ್ಲಿ ಜನರು ಆಕರ್ಷಿಸುತ್ತಾರೆ.
ಮಿಯಾರಿನ ಕಂಬಳ ಬೆಳೆದು ಬಂದ ರೀತಿ ಹೀಗಿದೆ 2004ನೇ ಇಸವಿಯಲ್ಲಿ ಮಿಯಾರಿನ ಲವಕುಶ ಜೋಡಿಕೆರೆ ಕಂಬಳವು ಪ್ರಾರಂಭವಾಯಿತು. ಆದರೆ ಇದಕ್ಕಿಂತ ಮುಂಚೆ 1970ರಲ್ಲಿ ಪಕ್ಕದ ಬಜಗೋಳಿಯಲ್ಲಿ ಕಂಬಳ ಪ್ರಾರಂಭವಾಗಿತ್ತು.ಅದು ಕ್ರಿಕೆಟ್ನ ಕಂಬಳವಾಗಿ ಕ್ರಿಕೆಟ್ನ ಕಂಬಳ ಆಗಿದ್ದರಿಂದ ತಾಂತ್ರಿಕ ಸಮಸ್ಯೆಗಳು ಎದುರಾದವು ಇಲ್ಲಿನ ಕಂಬಳವನ್ನು ನಡೆಸುತ್ತಾ ಬರುತ್ತಿದ್ದವರು ಜೈನ್ ಕುಟುಂಬದವರು ಮುಂದೆ ಆ ಕುಟುಂಬದ ಮಕ್ಕಳು ಈ ಒಂದು ತಾಂತ್ರಿಕ ಸಮಸ್ಯೆಯಿಂದಾಗಿ ಕಂಬಳವನ್ನು ಮುಂದುವರಿಸಲಿಲ್ಲ. 70ನೇ ಇಸವಿಯಲ್ಲಿ ಆ ಜಾಗವನ್ನು ಯಾರು ಕೇಳುವವರಿರಲಿಲ್ಲ ಯಾವುದೇ ಸಮಸ್ಯೆಗಳಳೂ ಇರಲಿಲ್ಲ ಆದರೆ 2000ನೇ ಇಸವಿಯಲ್ಲಿ ಬೆಳವಣಿಗೆಗಳು ಸಾಕಷ್ಟು ಆದ ಕಾರಣ ಮುಂದೆ ಅಲ್ಲಿ ಕಂಬಳವೇ ಮುಂದುವರಿಯಲಿಲ್ಲ. ಪ್ರಸ್ತುತ ಈಗ ಆ ಪ್ರದೇಶದಲ್ಲಿ ಪೈನಾಪಲ್ ಬೆಳೆಸುತ್ತಾ ಇದ್ದಾರೆ. 30 ವರ್ಷಗಳು ನಿರಂತರವಾಗಿ ನಡೆಯುತ್ತಿದ್ದ ಕಂಬಳ ಮೂರು ವರ್ಷ ನಿಂತೇ ಹೋಯಿತು. ಆ ಭಾಗದ ಜನರಿಗೆ ಕಂಬಳ ಬೇಕೆನಿಸುತ್ತಿತ್ತು ಆದ ಕಾರಣ ಬೇರೆ ಜಾಗವನ್ನು ಹುಡುಕಲು ಪ್ರಾರಂಭಿಸುತ್ತಾರೆ. ನಂತರದಲ್ಲಿ ಸಿಕ್ಕ ಜಾಗವೇ ಮಿಯಾರು ಮೊದಲಿಗೆ ಈ ಮಿಯಾರ್ ಎಂಬ ಜಾಗ ಇಂಡಸ್ಟ್ರಿಯಲ್ ಏರಿಯಾಕ್ಕೆ ಸಂಬಂಧಪಟ್ಟಿದಾಗಿರುತ್ತದೆ. ಆ ಕಾಲದ ಎಂಎಲ್ಎ ಆಗಿದ್ದಂತಹ ಸನ್ಮಾನ್ಯ ಎಚ್. ಗೋಪಾಲ ಭಂಡಾರಿ ಹಾಗೂ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಇಂಡಸ್ಟ್ರಿ ಏರಿಯಾ ಆಗಿದ್ದ ಆ ಜಾಗವನ್ನು ತಾಲೂಕು ಪಂಚಾಯಿತಿಗೆ ಹ್ಯಾಂಡ್ ಓವರ್ ಮಾಡಲಾಯಿತು. ಕಂಬಳ ನಡೆಸುತ್ತಿದ್ದವರ ಒಂದು ನಿಯಮ ಏನಾಗಿತ್ತು ಅಂದ್ರೆ ಸಾರ್ವಜನಿಕ ನೆಲೆಯಲ್ಲಿ ಆಗುವ ಯಾವುದೇ ಕಂಬಳಕ್ಕೆ ಎಂಎಲ್ಎ ಯಾರು ಆಗಿರುತ್ತಾರೋ ಅವರೇ ಅಧ್ಯಕ್ಷರರೂ ಆಗಿರುತ್ತಾರೆ. ಈ ಒಂದು ನಿಯಮ ಹಿಂದಿನಿಂದಲೂ ನಡೆಯುತ್ತಾ ಬರುತ್ತಿದೆ. ನಂತರ ಕಾರ್ಕಳದ ಜಗನ್ನಾಥ್ ಶೆಟ್ಟಿ ಹಾಗೂ ಗುಣಪಾಲ್ ಕಡಂಬ ಇವರು ಕಂಬಳ ನಡೆಯುವ ಜಾಗವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಾರೆ ಎಲ್ಲವನ್ನು ಸೂಕ್ತ ರೀತಿಯಲ್ಲಿ ವಿಶ್ಲೇಷಿಸುತ್ತಾರೆ. ಪ್ರಸ್ತುತ ಈಗ ಮಿಯಾರಿನ ಲವಕುಶ ಜೋಡಿಕೆರೆ ಕಂಬಳದ ಅಧ್ಯಕ್ಷರು ಸನ್ಮಾನ್ಯ ವಿ.ಸುನಿಲ್ ಕುಮಾರ್ ಅವರು. ಕಂಬಳಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸನ್ಮಾನ್ಯ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿಯೇ ನಡೆಯುತ್ತಿದೆ. ಆ ದಿನಗಳಲ್ಲಿ ಪ್ರವಾಸೋದ್ಯಮ ಸಚಿವರಾದ ಶ್ರೀರಾಮುಲು ಅವರ ಮೂಲಕ 84 ಲಕ್ಷ ರೂಪಯಿಗಳನ್ನು ಅನುದಾನವಾಗಿ ಒದಗಿಸಿ ಮಹಿಳೆಯರಿಗೆ ಮತ್ತು ಕುಳಿತುಕೊಳ್ಳುವ ಗ್ಯಾಲರಿ ಮತ್ತು ಸ್ಟಾರ್ಟಿಂಗ್ ಪಾಯಿಂಟ್ ನಿರ್ಮಾಣ ಮಾಡಲಾಯಿತು. ನಂತರದ ದಿನಗಳಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರ ಮೂಲಕ 25 ಲಕ್ಷ ಅನುದಾನವನ್ನು ಪಡೆದು ಕೆರೆ ರಿಪೇರಿ, ನೀರಾವರಿ ವ್ಯವಸ್ಥೆ, ಟ್ಯಾಂಕನ್ನು ಮಾಡಲಾಯಿತು. ಕಂಬಳದ ಅಧ್ಯಕ್ಷರು ಶಾಸಕರರೂ ಆದ ವಿ.ಸುನಿಲ್ ಕುಮಾರ್ ಅವರು ಶಾಸಕರ ಅನುದಾನದ ಮೂಲಕ ಅಲ್ಲಿನ ಯಜಮಾನರ ಚಾವಡಿಯನ್ನು ನಿರ್ಮಾಣ ಮಾಡಿಸಿದರು. ನಂತರ ಅಧ್ಯಕ್ಷರ ಪ್ರಯತ್ನದಿಂದ ರತ್ನಾಕರ್ ಹೆಗ್ಡೆ ಅವರ ಮೂಲಕ 50 ಲಕ್ಷ ಸ್ಯಾಂಕ್ಷನ್ ಮಾಡಿಸಿ ಪ್ರಿವಿಲಿಯನ್ ನಿರ್ಮಾಣ ಮಾಡಿಸಿದರು. ಮೂಲಭೂತ ಸೌಕರ್ಯಗಳು ಮಿಯರ್ ನ ಕಂಬಳದಲ್ಲಿ ಇರುವ ಹಾಗೆ ಬೇರೆ ಎಲ್ಲೂ ಇಲ್ಲ.ಇದ್ದಕ್ಕೆ ಮುಖ್ಯವಾಗಿ ಕಾರಣೀಭೂತರದವರು ಅಲ್ಲಿನ ಅಧ್ಯಕ್ಷರಾದ ವಿ. ಸುನಿಲ್ ಕುಮಾರ್ ಅವರು. ಕಂಬಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಸಮಸ್ಯೆಗಳು ಎದುರಾದರೂ ಅಲ್ಲಿಯವರು ಭಯಪಡದೆ ಧೈರ್ಯದಿಂದ ಎದುರಿಸುತ್ತಿದ್ದರು. ಕಂಬಳದಿಂದಾಗಿ ಅಲ್ಲಿನ ಕೆಲವರು ಸಿಹಿಗಿಂತ ಜಾಸ್ತಿ ಕಹಿಯೇ ಅನುಭವಿಸಿದರು ಸಹ ಅವರ ತಾಯಿ ಬೇರಾದ ಕಂಬಳವನ್ನು ಬಿಡದೆ ಅದನ್ನು ರಕ್ಷಿಸಿ ವಿಜೃಂಭಿಸುತ್ತಿದ್ದಾರೆ.
ಸುಷ್ಮಾ ತೃತೀಯ ಬಿ. ಎ ಜರ್ನಲಿಸಂ ಎಂ ಪಿ ಎಂ ಕಾಲೇಜು ಕಾರ್ಕಳ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.