logo
WhatsApp Image 2026-04-02 at 14.46.04.jpeg
hindalco everlast.jpeg

ವಿಶ್ವದ ಅತಿ ದೊಡ್ಡ ತುಟಿಗಾಗಿ 7.5 ಲಕ್ಷ ರೂಪಾಯಿ ಖರ್ಚುಮಾಡಿದ ಮಹಿಳೆ

ದೇಶ-ವಿದೇಶ
share whatsappshare facebookshare telegram
25 Feb 2023
post image

ಬಲ್ಗೇರಿಯಾ: ಇಲ್ಲೊಬ್ಬಳು ಯುವತಿ ವಿಶ್ವದ ಅತಿ ದೊಡ್ಡ ತುಟಿ ಹಾಗೂ ದೊಡ್ಡ ಕೆನ್ನೆ ಬೇಕು ಎಂದು ಚಿಕಿತ್ಸೆ ಪಡೆದುಕೊಂಡಿದ್ದಾಳೆ.ಬಲ್ಗೇರಿಯಾದ ಸೋಫಿಯಾದ ನಿವಾಸಿ ಆಂಡ್ರಿಯಾ ಇವನೊವಾ ಅತಿ ದೊಡ್ಡ ತುಟಿಗಳನ್ನು ಹೊಂದಲು ಬರೋಬ್ಬರಿ 7.9 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸದ್ಯ ದೊಡ್ಡ ಕೆನ್ನೆಯ ಮೂಳೆಗಳನ್ನು ಪಡೆಯಬೇಕೆಂದು ಬಯಸಿದ್ದಾರೆ.ಈ ಕುರಿತಾಗಿ ಮಾತನಾಡಿ, ‘ನಾನು ವಿಶ್ವದ ದೊಡ್ಡ ತುಟಿಗಳ ಜತೆಗೆ ದೊಡ್ಡ ಕೆನ್ನೆಯ ಮೂಳೆಗಳನ್ನು ಸಹ ಹೊಂದಲು ಬಯಸುತ್ತೇನೆ. ನನ್ನ ಗುರಿ ಮಾಡೆಲ್ ಆಗುವುದು. ಹೀಗಾಗಿ ಗಮನಾರ್ಹವಾದ ದೊಡ್ಡ ತುಟಿ ಬೇಕು. ಕೆನ್ನೆಯ ಮೂಳೆಗಳಲ್ಲಿ ನಾಲ್ಕು ಹೈಲುರಾನಿಕ್ ಆಸಿಡ್ ಚುಚ್ಚುಮದ್ದನ್ನು ಪಡೆದಿದ್ದೇನೆ.ಜನರ ಕಾಮೆಂಟ್‌ಗಳ ಬಗ್ಗೆ ನಾನು ಚಿಂತಿಸುವುದಿಲ್ಲ. ನಾನು ಸೌಂದರ್ಯದ ಬಗ್ಗೆ ನನ್ನದೇ ಆದ ಅಭಿರುಚಿ ಮತ್ತು ದೃಷ್ಟಿಕೋನಗಳನ್ನು ಹೊಂದಿದ್ದೇನೆ’ ಎಂದು ಆಂಡ್ರಿಯಾ ಹೇಳಿದ್ದಾರೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.