



ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ ಗೀತಾ ಜಯಂತಿಯನ್ನು ಆಚರಿಸಲಾಯಿತು.. ಬಳಿಕ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನೆರವೇರಿತು.ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕ ಎಸ್ ನಿತ್ಯಾನಂದ ಪೈ ಯವರು ವಹಿಸಿ ಗೀತಾಸಾರದ ಸಂದೇಶವನ್ನು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ನಿವೃತ ಪ್ರಾಂಶುಪಾಲಸಿದ್ಧಾಪುರ ವಾಸುದೇವ ಭಟ್ ರವರು ಲೋಕ ಪೂಜ್ಯ ಪವಿತ್ರ ಗೀತೆ ಭಗವದ್ಗೀತೆ. ವಿಶ್ವಮಾನ್ಯ ಅನೇಕ ಭಾಷೆಗಳಿಗೆ ಅನುವಾದವಾಗಿರುವುದೇ ಗೀತೆಯ ಶ್ರೇಷ್ಠತೆಯೂ ವೈಶಿಷ್ಟ್ಯತೆ ಯೂ ಆಗಿದೆ.ಮುಖ್ಯವಾಗಿ ಭಾರತೀಯ ಆಧ್ಯಾತ್ಮ ಪರಂಪರೆಯ ಸಾರವನ್ನು ತಿಳಿಸುತ್ತಿದೆ. ಈ ಗೀತೋಪದೇಶವೂ ಶ್ರೀಕೃಷ್ಣ ಭಗವಂತನೇ ಅರ್ಜುನಲ್ಲಿ ಆತನ ಧೀಶಕ್ತಿಯ ಮೌಲ್ಯಗಳನ್ನು ತಿಳಿಸುವುದರ ಮೂಲಕ ಪ್ರತಿಯೊಬ್ಬನಲ್ಲೂ ಆತ್ಮವಿಶ್ವಾಸ ತುಂಬುತ್ತಾ ಲೋಕಹಿತ ಕಾರ್ಯ ವನ್ನು ಮಾಡುವಲ್ಲಿ ಹಿಂಜರಿಯಬಾರದು ಎಂಬ ಸಂದೇಶವನ್ನು ನೀಡಿದ್ದಾನೆ. ಆ ಮೂಲಕ ಪ್ರತಿಯೊಬ್ಬರಲ್ಲೂ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ಬೆಳಗಿಸುವ ಸುದೀಪ್ತಿಯಂತಿರುವ ಗೀತೆಯು ಇದಾಗಿದೆ. ಎಂದರು. ವೇದಿಕೆಯಲ್ಲಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಶ್ರೀ ರಾಮಚಂದ ನಾಯಕ್ ಸದಸ್ಯರಾದ ಎರ್ಮಾಳ್ ಮೋಹನ್ ಶೆಣೈ ವಿದೇಶದಲ್ಲಿ ಉದ್ಯಮಿಯಾಗಿರುವ ಗಣೇಶ್. ಕಾಮತ್ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾ ಕಿಣಿ ಉಪಸ್ಥಿತರಿದ್ದರು. ಈ.ಸಂದರ್ಭದಲ್ಲಿ ಗೀತಾ ಜಯಂತಿ ಪ್ರಯುಕ್ತ ತಾಲೂಕಿನ ವಿವಿಧ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆ ಹಾಗೂ ಗೀತಾ ಪಠಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಎಲ್ಲರಿಗೂ ಶ್ರೀಕೃಷ್ಣ ಪ್ರಸಾದವನ್ನು ವಿತರಿಸಲಾಯಿತು. ಪ್ರೌಢ ಶಾಲಾ ಮುಖ್ಯಶಿಕ್ಷಕಿ ವೃಂದಾ ಶೆಣೈ ಕಾರ್ಯ ಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿದರು.ಕಾರ್ಯಕ್ರಮವನ್ನು ಶಾರೀರಿಕ ಶಿಕ್ಷಣ ಶಿಕ್ಷಕ ಸಂಜಯ ಕುಮಾರ್ ನಿರೂಪಿಸಿದರು. ಬಹುಮಾನ ವಿಜೇತರ ಹೆಸರನ್ನು ಶಿಕ್ಷಕಿ ಪೂರ್ಣಿಮಾ ಶೆಣೈ ವಾಚಿಸಿದರು.ಶಿಕ್ಷಕಿ ಇಂದಿರಾ ಪಿ ನಾಯಕ್ ಧನ್ಯವಾದವಿತ್ತರು. ಪುರೋಹಿತ ವೇದಮೂರ್ತಿ ಗುರುದತ್ತ ಶೆಣೈ ಯವರು ಶ್ರೀ ಕೃಷ್ಣನ ಪೂಜೆ ನೆರವೇರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.