logo
WhatsApp Image 2026-04-02 at 14.46.04.jpeg
hindalco everlast.jpeg

ರಂಗ ತರಬೇತಿ ಕಾರ್ಯಾಗಾರ

ಕರಾವಳಿ
share whatsappshare facebookshare telegram
5 Mar 2023
post image

ಅಭಿನಯಶ್ರೀ ಉಮೇಶ್ ಹೆಗ್ಡೆ ಕಡ್ತಲ ಅಭಿಮಾನಿ ಬಳಗದ ವತಿಯಿಂದ ಸಿರಿಬೈಲು ದೇವಸ್ಥಾನದ ವಠಾರದಲ್ಲಿ ಎರಡು ದಿನಗಳ ರಂಗ ತರಬೇತಿ ಕಾರ್ಯಾಗಾರ ನಡೆಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ದೈಹಿಕ ಹಾಗೂ ಯೋಗ ಶಿಕ್ಷಕ ಶೇಖರ್ ಕಡ್ತಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಹಾಗೂ ಸಿನಿಮಾ ನಟರಾದ ತೆಲಿಕೆದ ತೆನಾಲಿ ಸುನೀಲ್ ನೆಲ್ಲಿಗುಡ್ಡೆ, ಶ್ರೀ ವಸಂತ್ ಮುನಿಯಾಲ್, ಕಿಶೋರ್ ಶೆಟ್ಟಿ ಪಿಲಾರ್, ಕಡ್ತಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಡಾ ಪ್ರಮೋದ್ ಕುಮಾರ್, ಹಿರಿಯರಾದ ಧರ್ಮರಾಜ ಕುದ್ರೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ರಂಗ ನಿರ್ದೇಶಕರಾದ ಶ್ರೀ ದಿವಾಕರ್ ಕಟೀಲ್, ಯೋಗೀಶ್ ಕೊಳಲಗಿರಿ ಹಾಗೂ ಡಾ ವಿಷ್ಣುಮೂರ್ತಿ ಪ್ರಭು ಸಂಪನ್ಮೂಲ ವ್ಯಕ್ತಿಗಳಾಗಿ ಸುಮಾರು 25ಕ್ಕೂ ಮಿಕ್ಕಿ ಯುವ ಕಲಾವಿದರಿಗೆ ರಂಗಶಿಕ್ಷಣ ನೀಡಿದರು. ಶ್ರೀ ಚಂದ್ರಕಾಂತ್ ಹೆಗ್ಡೆ ಕಡ್ತಲ, ಶ್ರೀ ಸುಕೇಶ್ ಹೆಗ್ಡೆ ಕಡ್ತಲ, ಶ್ರೀ ಸಂಜೀವ ಪೂಜಾರಿ ಕಡ್ತಲ, ಸಿರಿಬೈಲು ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಸುವರ್ಣ, ಸಾಂಸ್ಕ್ರತಿಕ ಕಾರ್ಯದರ್ಶಿ ಶ್ರೀ ಹರೀಶ್ ಹೆಗ್ಡೆ, ಕ್ರೀಡಾ ಕಾರ್ಯದರ್ಶಿ ಶ್ರೀ ಪ್ರವೀಣ್ ಪೂಜಾರಿ, ಶ್ರೀ ಪುರಂದರ ನಾಯಕ್, ಶ್ರೀಮತಿ ರೇವತಿ ನಾಯಕ್, ಸುನೀಲ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು. ಹರೀಶ್ ಪೂಜಾರಿ ಕಡ್ತಲ, ಸುಮನ್, ಸವಿನ್ ಸಹಕರಿಸಿದರು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.