



ತೀರ್ಥಹಳ್ಳಿ: ಕಳೆದ ಅನೇಕ ವರ್ಷಗಳಿಂದ ಮಲೆನಾಡಿನಾದ್ಯಂತ ಬೀತಿ ಹುಟ್ಟಿಸಿದ್ದ ಮಂಗನಕಾಯಿಲೆ ಸದ್ದಿಲ್ಲದೆ ಹಬ್ಬುತ್ತಿದೆ. ಜ.21 ರಂದು ಈ ವರ್ಷದ ಮೊದಲ ಪ್ರಕರಣ ಪತ್ತೆಯಾಗಿದೆ.

ಕಳೆದೆರಡು ದಶಕದಿಂದ ಶಿವಮೊಗ್ಗ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ಪತ್ತೆ ಯಾಗಿದ್ದ ಮಂಗನ ಕಾಯಿಲೆ 70 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು ನೂರಾರು ಜನರು ಮಂಗನ ಕಾಯಿಲೆ ಜ್ವರದಿಂದ ಬಳಲಿದ್ದರು. ಶೆಟ್ಟಿಗಳ ಕೊಪ್ಪ, ಲಕ್ಕುಂದ, ದೊಡ್ಡಿನಮನೆ, ದಿಂಡ, ಬಿಳುಮನೆ, ಹುರುಳಿ, ಕೈಮರ, ಮಹಿಷಿ, ದಬ್ಬಣಗದ್ದೆ ಭಾಗದಲ್ಲಿ ಹೆಚ್ಚಾಗಿ ಕಂಡುಬಂದ ಈ ರೋಗ ಇತ್ತೀಚಿನ ವರ್ಷದಲ್ಲಿ ಕನ್ನಂಗಿ, ನಾಯದವಳ್ಳಿ, ಕುಡುವಳ್ಳಿ, ಮಂಡಗದ್ದೆ, ಸಿಂಧುವಾಡಿ, ಹಣಗೆರೆ, ಕೋಣಂದೂರು, ಹಾದಿಗಲ್ಲು, ದೇಮ್ಲಾಪುರ, ಅಲಸೆ , ತ್ರಿಯಂಬಕಪುರ, ಮಳಲಿಮಕ್ಕಿ, ಜೋಗಿಕೊಪ್ಪ, ಅರಳಿಕೊಪ್ಪ, ಹಾರೋಗೊಳಿಗೆ, ದೇವಂಗಿ, ಕಟ್ಟೆಹಕ್ಕಲು, ಹೆದ್ದೂರು, ಶೇಡ್ಗಾರ್ ಅನೇಕ ಗ್ರಾಮಗಳಲ್ಲಿ ಕಾಣಿಸಿತ್ತು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.