



ಕಾರ್ಕಳ : ಅಶೋಕ್ ನಾಯಕ್ ಎಂಬುವವರ 25000 ಮೌಲ್ಯದ ದನವೊಂದು ಕಳ್ಳತನ ವಾಗಿದ್ದು ಇದರ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪಳ್ಳಿಯ ಅಶೋಕ್ ನಾಯಕ್ ಅವರು ದೇಶಿ ತಳಿಯ ಗೋವನ್ನು ಸಾಕುತಿದ್ದು, ಎಂದಿನಂತೆ ದನವನ್ನು ಹಟ್ಟಿಯಿಂದ ಮೇಯಲು ಬಿಟ್ಟಿದ್ದು, ರಾತ್ರಿಯೂ ದನವು ಎಂದಿನಂತೆ ಮನೆಗೆ ವಾಪಾಸು ಬಂದಿಲ್ಲ. ರಾತ್ರಿ ಹಟ್ಟಿಗೆ ಬಾರದೇ ಇದ್ದುದರಿಂದ ಅಶೋಕ್ ನಾಯಕ್ ಹಾಗೂ ಅವರ ಗೆಳೆಯರು ಪಳ್ಳಿ ಪೇಟೆಯಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದಾರೆ ಸಿಗಲಿಲ್ಲ .16 ಬೆಳಿಗ್ಗೆ 09:00 ಗಂಟೆಯಿಂದ ದಿನಾಂಕ ರಂದು ಬೆಳಿಗ್ಗೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆ ಇದ್ದು 15 ರಂದು .02:00 ಗಂಟೆಯ ಸಮಯ ಒಂದು ರಿಟ್ಜ್ ಕಾರು ಪಳ್ಳಿ ಪೆಟ್ರೋಲ್ ಪಂಪ್ ಬಳಿ ಅನುಮಾನಾಸ್ಪದ ರೀತಿಯಲ್ಲಿ ಸ್ವಲ್ಪ ಸಮಯ ನಿಂತಿದ್ದು ಬಳಿಕ ಕಾರು ಉಡುಪಿ ಕಡೆಗೆ ತೆರಳಿರುವ ದೃಶ್ಯಾವಳಿಗಳು ಪೆಟ್ರೋಲ್ ಪಂಪ್‌ನ ಸಿಸಿ ಟಿವಿ ಕ್ಯಾಮೇರಾದಲ್ಲಿ ಸೆರೆಯಾಗಿರುವುದನ್ನು ಅಶೋಕ ನಾಯಕ್ ಹಾಗೂ ಗೆಳೆಯ ರಾಜೇಶ್ ಆಚಾರ್ಯರವರು ನೋಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.