



ಕುಂದಾಪುರ: ದಕ್ಕೆಯಲ್ಲಿ ಲಂಗಾರು ಹಾಕಿದ್ದ ಎರಡು ಮೀನುಗಾರಿಕಾ ಬೋಟ್ ಗಳ ನಾಲ್ಕು ಬ್ಯಾಟರಿಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಕಸಬ ಗ್ರಾಮದ ಕೋಡಿ ಸಿ ವಾಕ್ ಬಳಿ ನಡೆದಿದೆ. ಕೋಡಿ ನಿವಾಸಿ ಅಶೋಕ ಪೂಜಾರಿ ಹಾಗೂ ಅವರ ನೆರೆಮನೆಯ ಸುರೇಶ ಖಾರ್ವಿ ಎಂಬುವರು ಮೀನುಗಾರಿಕಾ ಬೋಟ್ ನ ಮಾಲೀಕರಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಕೋಡಿ ಸಿ ವಾಕ್ ಬಳಿ ಬೋಟ್ ಗಳನ್ನು ನಿಲ್ಲಿಸಿದ್ದರು. ಜುಲೈ 17ರಂದು ಇಬ್ಬರು ಬೋಟ್ ಇಂಜಿನ್ ಸ್ಟಾರ್ಟ್ ಮಾಡುವ ಉದ್ದೇಶದಿಂದ ಬೋಟ್ ನಿಲ್ಲಿಸಿದ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ, ಬೋಟ್ ಸ್ಟಾರ್ಟ್ ಆಗದಿದ್ದಾಗ ಬೋಟ್ ನ ಬ್ಯಾಟರಿ ಬಾಕ್ಸ್ ತೆಗೆದು ನೋಡಿದಾಗ 2 ಬೋಟ್ ನ ತಲಾ 2 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ವಿಚಾರ ಗೊತ್ತಾಗಿದೆ. ಜುಲೈ 16ರ ರಾತ್ರಿ 8ಗಂಟೆಯಿಂದ ಜುಲೈ 17ರ ಬೆಳಿಗ್ಗೆ 9ಗಂಟೆಯ ಮದ್ಯಾವಧಿಯಲ್ಲಿ 24 ವ್ಯಾಟ್ ನ ತಲಾ 8 ಸಾವಿರ ಮೌಲ್ಯದ 2 ಬೋಟ್ ನ ತಲಾ 2 ಬ್ಯಾಟರಿಯಂತೆ ಒಟ್ಟು 4 ಬ್ಯಾಟರಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಬ್ಯಾಟರಿಗಳ ಒಟ್ಟು ಮೌಲ್ಯ 32 ಸಾವಿರ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.