



ಕಾರ್ಕಳ : ಮಾಂಸಕ್ಕಾಗಿ ತಂದಿದ್ದ ಆಡುಗಳನ್ನು ಅಂಗಡಿಯಿಂದ ಆಡುಗಳನ್ನು ಕಳವು ಗೈದ ಘಟನೆ ಕಾರ್ಕಳ ತಾಲೂಕಿನ ಜೋಡುರಸ್ತೆ ಎಂಬಲ್ಲಿ ಜುಲೈ5 ರಂದು ನಡೆದಿದೆ.
ಕಾರ್ಕಳ ತಾಲೂಕಿನ ಜೋಡುರಸ್ತೆಯಲ್ಲಿ ಅನೇಕ ವರ್ಷಗಳಿಂದ ಅಶ್ಪಕ್ ಎಂಬುಔರು ಮಟನ್ ಸ್ಟಾಲ್ ನಡೆಸುತ್ತಿದ್ದು, ಮಾಂಸಕ್ಕಾಗಿ ಕುರಿ ಮತ್ತು ಆಡುಗಳನ್ನು ತಂದು ಸ್ಟಾಲ್ ಪಕ್ಕ ದೊಡ್ಡಿ ರಚನೆ ಮಾಡಿ ಅದರಲ್ಲಿ ಕೂಡಿಹಾಕುತ್ತಿದ್ದರು. ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿದ ಅವರು ಆಡುಗಳ ಶೆಡ್‌ಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಆದರೆ ಬುಧವಾರ ಮುಂಜಾನೆ ಅಂಗಡಿಗೆ ಬಂದಾಗ ರಾತ್ರಿ ಯಾರೋ ದುಷ್ಕರ್ಮಿಗಳು ದೊಡ್ಡಿಯ ಬೀಗ ಮುರಿದು 9 ಆಡುಗಳನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ. ಕಳವಾದ ಆಡುಗಳ ಮೌಲ್ಯ 1 ಲಕ್ಷದ 49 ಸಾವಿರ ರೂ.ಗಳಾಗಿದ್ದು ಅಶ್ಪಕ್ ಕಾರ್ಖಳ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.