



ಕಾರ್ಕಳ: ಯೋಗದಿಂದ ರೋಗರುಜಿನಗಳ ಭಯವಿಲ್ಲ , ನಿತ್ಯ ಬದುಕು ಉತ್ಸಾಹದಾಯಕವಾಗಿರುತ್ತದೆ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು . ಕಾರ್ಕಳ ತಾಲೂಕಿನ ಕೆರುವಾಸೆ ಗ್ರಾಮದ ಸಾಗರ್ ಕಾಂಪ್ಲೆಕ್ಸ್ ನಲ್ಲಿ ಆಯುಷ್ಯ ಮಂಡಲ ಯೋಗ ಹಾಗೂ ನಿಸರ್ಗ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿ, ಯೋಗ ಮನಸ್ಸು ಹಾಗೂ ದೇಹವನ್ನು ಸಮತೋಲನವನ್ನು ಕಾಪಾಡಿಕೊಂಡು ಜೀವನದಲ್ಲಿ ಉಲ್ಲಾಸವನ್ನು ಹಾಗೂ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿ ಎಂದರು .
ಕಾರ್ಕಳ ಪುರಸಭೆಯ ಅಧ್ಯಕ್ಷೆ ಸುಮಾ ಕೇಶವ ಮಾತನಾಡಿ ನೈಸರ್ಗಿಕ ಚಿಕಿತ್ಸಾ ವಿಧಾನ ದೇಹಕ್ಕೆ ತುಂಬಾ ಪರಿಣಾಮಕಾರಿ ಎಂದರು.
ಕಾರ್ಕಳ ಪುರಸಭಾ ಸದಸ್ಯೆ ಭಾರತಿ ಅಮೀನ್ ಮಾತನಾಡಿದರು
ಕೆರುವಾಶೆ ಗ್ರಾ. ಪಂ. ಅಧ್ಯಕ್ಷೆ ಜಯಂತಿ ಹಾಗೂ ಶಿರ್ಲಾಲು ಗ್ರಾ ಪಂ. ಅಧ್ಯಕ್ಷ ರಮಾನಂದ ಕೋಟ್ಯಾನ್ ಸಂಸ್ಥೆ ಗೆ ಶುಭಹಾರೈಸಿದರು.
ಆಯುಷ್ಯ ಮಂಡಲಂ ಸಂಸ್ಥೆಯ ಮುಖ್ಯಸ್ಥರಾದ ದಯಾನಂದ್ ಸಾಲಿಯಾನ್
ಯೋಗದ ಮಹತ್ವ ತಿಳಿಸಿದರು.
ಶ್ರೀಮತಿ ಅನುಷ್ಕಾ ಸಾಲಿಯನ್ ನೈಸರ್ಗಿಕ ಚಿಕಿತ್ಸೆಗಳ ಮಹತ್ವ ಬಗ್ಗೆ ಮಾಹಿತಿ ಹಂಚಿಕೊಂಡರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.