



ಕಾರ್ಕಳ : ಕಳೆದ ಮೂವತ್ತು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ರೆಂಜಾಳ ಎಡ್ಯಾರ ಮನೆಯ ಯುವರಾಜ್ ಜೈನ್(೬೫) ನ.೦೭ ರ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ದಕ್ಷಿಣ ಕನ್ನಡ ಉಡುಪಿ ಕಾಸರಗೋಡು ಜಿಲ್ಲೆಗಳ ಜೋಡುಕರೆ ಕಂಬಳದಲ್ಲಿ ಅಡ್ಡ ಹಲಗೆಯ ವಿಭಾಗದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು . ಪ್ರಸಕ್ತ ವರ್ಷದ ಪ್ರಥಮ ಜೋಡುಕರೆ ಕಂಬಳವಾಗಿದ್ದ ಬಂಟ್ವಾಳ ತಾಲೂಕಿನ ಹೊಕ್ಕಾಡಿ ಗೋಳಿಯಲ್ಲಿ ನಡೆದ ಜೋಡುಕರೆ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ದ್ವಿತೀಯ ಬಹುಮಾನ ಇವರ ಪಾಲಿಗೆ ಲಭಿಸಿತು. ಮೃತರು ಪತ್ನಿ, ನಾಲ್ವರು ಹೆಣ್ಣು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.