logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪ್ರಧಾನ ಮಂತ್ರಿಗಳ ಕುರಿತಂತೆ ಇಡಿ ಕಾಂಗ್ರೆಸ್ ಪಕ್ಷದಲ್ಲಿಯೆ ವಿಷವಿದೆ - ಸುನೀಲ್ ಕುಮಾರ್

ಟ್ರೆಂಡಿಂಗ್
share whatsappshare facebookshare telegram
30 Apr 2023
post image

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಹೇಳಿಕೆಗೆ ತಿರುಗೇಟು ನೀಡಿದ

ಕಾರ್ಕಳ: ಕಾಂಗ್ರೆಸ್ ಸಂಸ್ಕೃತಿ ಏನೆಂಬುದು ಮತ್ತೆ ಸಾಬೀತು ಪಡಿಸಿದೆ . ವಿಷ ಸರ್ಪ ಹೇಳಿಕೆ ನಾಗರೀಕ ಸಮಾಜಕ್ಕೆ ನೀಡುವ ಗೌರವವಲ್ಲ, ಪ್ರಧಾನ ಮಂತ್ರಿಗಳ ಕುರಿತಂತೆ ಇಡಿ ಕಾಂಗ್ರೆಸ್ ಪಕ್ಷದಲ್ಲಿಯೆ ವಿಷವಿದೆ, ಕಾಂಗ್ರೆಸ್ ಪಕ್ಷದ ಮನಸ್ಸು, ಭರವಸೆಗಳು, ನಡವಳಿಕೆಗಳು ವಿಷಮಯವಾಗಿದೆ. ವಿಷಪೂರಿತ ಮನಸ್ಸುಗಳಿಂದ ಮಾತ್ರ ವಿಷಸರ್ಪ ಹೇಳಿಕೆ ಬರುತ್ತವೆ.

ನರೇಂದ್ರ ಮೋದಿ ಜಗತ್ತಿನ ನಾಯಕ ,ಉತ್ತಮ ಆಡಳಿತ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ . ಈ ಹೇಳಿಕೆಗಳನ್ನು ಸಮಾಜ ಸ್ವೀಕರಿಸುವುದಿಲ್ಲ ಎಂದು ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳ ವಿಕಾಸ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಂದು ಸೋನಿಯಾ ಗಾಂಧಿ ಪ್ರಧಾನಿ ಮೋದಿಯವರನ್ನು ಮೌತ್ ಕಾ ಸೌಧಾಗರ್ ಎಂದು ಕರೆದಿದ್ದರು , ಸಿದ್ದರಾಮಯ್ಯ ನರಹಂತಕ ಎಂದಿದ್ದರು. ಪದೆ ಪದೇ ಕೀಳುಮಟ್ಟದ ಹೇಳಿಕೆಗಳನ್ನು ಪ್ರಧಾನಿ ಮೋದಿ ಬಗ್ಗೆ ನೀಡುವುದು ದೇಶವನ್ನು ಅವಮಾನಿಸಿದಂತೆ . ಕಾಂಗ್ರೆಸ್ ಪಕ್ಷ ಈಗಾಲೂ ಗಾಂಧಿಕುಟುಂಬದ ಕೃಪಕಟಾಕ್ಷದಂತೆ ಬದುಕುತ್ತಿದೆ. ನಾಮಕಾವಸ್ಥೆಗೆ ಖರ್ಗೆಯವರು ಅಧ್ಯಕ್ಷರಾಗಿದ್ದಾರೆ .

ಗಾಂಧಿ ಕುಟುಂಬದ ಅಡುಗೆಮನೆಯಲ್ಲಿ ಮಾತನಾಡುವ ಮಾತು , ಇಂದು ಖರ್ಗೆಯವರು ತಮ್ಮ ಭಾಷಣ ರೂಪದಲ್ಲಿ ಹೇಳಿಕೆಕೊಡುತ್ತಿದ್ದಾರೆ .ಖರ್ಗೆಯವರಂತಹ ಹಿರಿಯ ರಾಜಕಾರಣಿ ,ಅನುಭವಿ ಗಳು, ಗಾಂಧಿ ಕುಟುಂಬವನ್ನು ಓಲೈಸುವ ಸಲುವಾಗಿ ಈ ಹೇಳಿಕೆಗಳನ್ನು ನೀಡುತಿದ್ದಾರೆ ಎಂದರು .

ಪತ್ರಿಕಾ ಗೋಷ್ಠಿಯಲ್ಲಿ ಖರ್ಗೆಯವರು ಕುಂಕುಮವನ್ನು ಅಳಿಸಿರುವ ಬಗ್ಗೆ ಮಾತನಾಡಿದ ಸುನೀಲ್ ಕುಮಾರ್ ,

ಕ್ಯಾಮೆರಾ ಗಳು ಪತ್ರಕರ್ತರ ಮುಂದೆ ಖರ್ಗೆಯವರು ಕುಂಕುಮ ಅಳಿಸಿರುವುದು ಕಾಂಗ್ರೆಸ್ಸಿನ ಮಾನಸೀಕತೆ ಎಷ್ಟಿದೆ ಎಂದು ತೋರಿಸುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ಸಿಕ್ಕರೆ ರಾಜ್ಯದ ಜನರ ಕುಂಕುಮವನ್ನು ಕಾಂಗ್ರೆಸ್ ಪಕ್ಷ ಅಳಿಸಿಹಾಕಬಹುದು.. ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ.

ಈ ಹಿಂದೆ ಸಿದ್ದರಾಮಯ್ಯ ನವರು ಕುಂಕುಮ ಕಂಡರೆ ನನಗೆ ಅಲರ್ಜಿ ಎಂಬ ಹೇಳಿಕೆ ,ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಿಂದು ಶಬ್ದ ಅಶ್ಲೀಲ ಪದ ಗಳ ಬಗ್ಗೆ ಉಲ್ಲೇಖಿಸಿದ ಸುನೀಲ್ ಕುಮಾರ್ ಕಾಂಗ್ರೆಸ್ ಗೆ ಹಿಂದು ಅಶ್ಲೀಲವಾಗಿ ಕಾಣುತ್ತದೆ. ಸಿದ್ದರಾಮಯ್ಯ ನವರು ಕುಂಕುಮ ಕಂಡರೆ ಅಲರ್ಜಿ, ಹಿಂದು ಅಶ್ಲೀಲತೆ , ಖರ್ಗೆಯವರು ಕುಂಕುಮ ಅಳಿಸಿರುವುದು ಆ ಮೂಲಕ ಕಾಂಗ್ರೆಸ್ ಪಕ್ಷದ ಮಾನಸೀಕತೆ ಮತ್ತೆ ಮತ್ತೆ ಜಗಜ್ಜಾಹಿರಾಗಿದೆ . ರಾಜ್ಯದ ಮತದಾರರು ಎಚ್ಚರಿಕೆಯಿಂದ ಇರಬೇಕು , ಕುಂಕುಮದಬಗ್ಗೆ ಗೌರವವಿಲ್ಲ ಎಂದಾದರೆ , ದೇಶದ ಬಗ್ಗೆಯು ಕಾಂಗ್ರೆಸ್ ಪಕ್ಷ ಕ್ಕೆ ಗೌರವ ವಿಲ್ಲ , ಕುಂಕುಮ ವಿರೋಧೀಗಳನ್ನು ಮತದಾರರು ಬೆಂಬಲಿಸುವುದಿಲ್ಲ , ತುಷ್ಠಿಕರಣದ ರಾಜಕಾರಣಕ್ಕೆ ಇತಿಮಿತಿಯಿದೆ . ಖರ್ಗೆಯವರ ನಡವಳಿಕೆ ಹಾಗೂ ಹೇಳಿಕೆಗಳನ್ನು ಸುನೀಲ್ ಕುಮಾರ್ ಖಂಡಿಸಿದರು.

ನ.30 ರಂದು ಭಾನುವಾರ ಕಾರ್ಕಳ ವಿಧಾನ ಸಭ ವ್ಯಾಪ್ತಿಯಲ್ಲಿ ಮಹಾ ಸಂಪರ್ಕ ಅಭಿಯಾನ ನಡೆಯಲಿದ್ದು. 210 ಬೂತ್ ಗಳಲ್ಲಿಯೂ ಬೆ.7 ರಿಂದ ನೂರಾರು ಕಾರ್ಯಕರ್ತರು ಏಕಕಾಲದಲ್ಲಿ ಮನೆಮನೆ ಭೇಟಿ ನೀಡಲಿದ್ದಾರೆ . ಒಂದೇ ದಿನ ಎಲ್ಲಾ ಮನೆಮನೆಗಳನ್ನು ತಲುಪವವರಿದ್ಸಾರೆ ಎಲ್ಲಾ ಕಾರ್ಯಕರ್ತರು ಮಹಾ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸುನೀಲ್ ಕುಮಾರ್ ಕಾರ್ಯಕರ್ತರಿಗೆ ಕರೆನೀಡಿದರು.

ಕಾರ್ಕಳ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಬಗ್ಗೆ ಭಯವಿದೆ ಅದಕ್ಕಾಗಿ ಕಾರ್ಕಳ ಕಾಂಗ್ರೆಸ್ ಮುತಾಲಿಕ್ ಟೀಂ ಅನ್ನು ಸೃಷ್ಠಿಸಿದೆ. . ಮುತಾಲಿಕ್ ಟೀಂ , ಉದಯಕುಮಾರ್ ಶೆಟ್ಟಿ ಎರಡೂ ಕಡೆಗಳಲ್ಲಿಯು ಅದೇ ಕಾಂಗ್ರೆಸ್ ಕಾರ್ಯಕರ್ತರೇ ಕಾಣಿಸುತಿದ್ದಾರೆ , ಮುತಾಲಿಕ್ ಕಾಂಗ್ರೆಸ್ ಪಕ್ಷದ ವಿರುದ್ಧ ಎಲ್ಲಿಯೂ ಮಾತನ್ನು ಆಡಿಲ್ಲ ಎಂದರು

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್, ಕ್ಷೇತ್ರಾಧ್ಯಕ್ಷ ಮಹವೀರ ಹೆಗ್ಡೆ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.