



ಕಾಪು: ನಕಲಿ ಕೀ ಬಳಸಿ ಮನೆಯ ಬಾಗಿಲು ತೆರೆದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಉಪಕರಣ ಕಳವು ಮಾಡಿರುವ ಘಟನೆ ಕಾಪು ತಾಲೂಕಿನ ಮೂಳುರು ಗ್ರಾಮದ ಶ್ರೀ ಸಾಯಿ ವಾಚ೯ರ್ ಪ್ಲಾಟ್ ನಲ್ಲಿ ಆ.10ರಂದು ಬೆಳಕಿಗೆ ಬಂದಿದೆ. ಮೂಳುರು ಗ್ರಾಮದ ಶ್ರೀ ಸಾಯಿ ವಾಚ೯ರ್ ಪ್ಲಾಟ್ ನಿವಾಸಿ ಆರ್ಜ್ಯೂ ಸರ್ಪರಾಜ್ ಮನೆಯಲ್ಲಿ ಕಳ್ಳತನ ನಡೆದಿದೆ. ಇವರು ಆ.,8ರಂದು ರಾತ್ರಿ 8.30ಕ್ಕೆ ಸುಮಾರಿಗೆ ಮಗನೊಂದಿಗೆ ಅವರ ಉಡುಪಿಯ ಕಿನ್ನಿಮೂಲ್ಕಿಯ ತನ್ನ ತಂಗಿ ಮನೆಗೆ ಹೋಗಿದ್ದರು. ಆಭರಣಗಳನ್ನು ಕಪಾಟಿನಲ್ಲಿಟ್ಟು ಬೀಗ ಹಾಕಿ ಹೋಗಿದ್ದರು. ಆ.10ರಂದು ಬೆಳಿಗ್ಗೆ ಮನೆಗೆ ಬಂದು ಕಪಾಟನ್ನು ತೆರೆದು ನೋಡಿದಾಗ ಆಭರಣ ಕಳವಾಗಿರುವುದು ಗೊತ್ತಾಗಿದೆ. 12 ಗ್ರಾಂ ತೂಕದ ಕರಿಮಣಿ ಸರ, 12 ಗ್ರಾಂ ತೂಕದ ಬ್ರಾಸ್ ಲೈಟ್, 8 ಗ್ರಾಂ ತೂಕದ ಬ್ರಾಸ್ ಲೈಟ್, 12 ಗ್ರಾಂ ತೂಕದ 6 ಚಿನ್ನದ ಉಂಗುರ, ಸ್ಮಾಟ೯ ವಾಚ್, ಡ್ರಿಲ್ಲಿಂಗ್ ಮಿಷಿನ್, ಐರನ್ ಬಾಕ್ಸ್ ಸಹಿತ 1.98ಲಕ್ಷ ರೂ ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.