



ಜಾತ್ರೆಯಲ್ಲಿ ಪಾರ್ಕಿಂಗ್ ಮಾಡಿರುವ ಕಾರ್ಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ನ ಓರ್ವ ಖದೀಮನನ್ನು ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ಫೇಮಸ್ ಜಾತ್ರೆಗಳನ್ನೇ ಈ ಗ್ಯಾಂಗ್ ಟಾರ್ಗೆಟ್ ಮಾಡುತ್ತಿತ್ತು. ಅದೇ ರೀತಿಯಾಗಿ ಜ.30 ರಂದು ಕಲಬುರಗಿಯ ನಾಲವಾರದ ಕೋರಿ ಸಿದ್ದೇಶ್ವರ ಜಾತ್ರೆಯಲ್ಲಿ ಇನ್ನೋವಾ ಕಾರು ಕಳ್ಳತನ ಮಾಡಿದ್ದರು. ಪ್ರಕರಣ ಬೆನ್ನು ಹತ್ತಿಹೋದ ಪೊಲೀಸರಿಗೆ ಖದೀಮರ ಅಸಲಿ ವಿಚಾರ ತಿಳಿದಿದೆ.
ಸದ್ಯ ಮಹಾರಾಷ್ಟ್ರ ಮೂಲದ ವಿಠ್ಠಲ್ ಲಷ್ಕರೆ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನುಳಿದ ನಾಲ್ವರಿಗಾಗಿ ಖಾಕಿ ಪಡೆ ಶೋಧ ನಡೆಸಿದೆ. ಬಂಧಿತನಿಂದ ಇನ್ನೋವಾ ಕಾರು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳು ಹಾಗೂ ಕದ್ದ ಕಾರುಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇಷ್ಟೇ ಅಲ್ಲದೆ ಇನ್ನು ಹಲವು ಕಾರು ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಸಿದ್ಧ ಜಾತ್ರಾ ಮಹೋತ್ಸವಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಗ್ಯಾಂಗ್, ಜಾತ್ರೆಗೆ ಬಂದಿದ್ದ ಜನರ ಕಾರ್ ಗಳನ್ನೆ ಕಳ್ಳತನ ಮಾಡುತ್ತಿದ್ದರು. ಕಾರ್ ಕೀಗಳನ್ನ ಬೆಲ್ಟ್ಗೆ ಹಾಕುವವರನ್ನು ಹಿಂಬಾಲಿಸುತ್ತಿದ್ದ ಗ್ಯಾಂಗ್, ಬಳಿಕ ಕೀ ಎಗರಿಸಿ ಕಾರು ಕಳ್ಳತನ ಮಾಡುತ್ತಿದ್ದರು.
ಬದಾಮಿ ಬನಶಂಕರಿ ದೇವಿ ಜಾತ್ರೆಯಲ್ಲಿ ಎರಡು ಕಾರ್, ಎಮ್ಮಿಗನೂರು ಜಾತ್ರೆಯಲ್ಲಿ ಒಂದು ಕಾರು ಕದ್ದು ಪಾರಾರಿಯಾಗಿದ್ದಾರೆ. ಅಲ್ಲದೇ ಮುಂದಿನ ಜಾತ್ರೆಗಳ ಬಗ್ಗೆ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರು. ಇನ್ನು ಕದ್ದ ಕಾರ್ಗಳನ್ನ ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರು. ಸದ್ಯ ವಾಡಿ ಪೊಲೀಸರಿಂದ ಓರ್ವನ ಬಂಧನ ಮಾಡಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.