



ಕಾರ್ಕಳ : ಪ್ರಸಕ್ತ ಆಡಳಿತಕ್ಕೆ ಬಂದ ಈದು ಗ್ರಾಮ ಪಂಚಾಯಿತ್ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಈದು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪುರುಷೋತ್ತಮ ರಾವ್ ಆರೋಪಿಸಿದ್ದಾರೆ. ಗ್ರಾ.ಪಂ ಚುನಾವಣಾ ಸಂದರ್ಭದಲ್ಲಿ 24 ಘಂಟೆಯು ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಜನರಿಗೆ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದ ಈಗಿನ ಪಂಚಾಯಿತ್ ಆಡಳಿತ ವ್ಯವಸ್ಥೆ ಹಣ ಕೊಟ್ಟರೂ, ಸಾರ್ವಜನಿಕರು ವಾರಗಟ್ಟಲೆ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಕೆಲಸದ ಬಗ್ಗೆ ಮನವಿ ಮಾಡಲು ಬಂದ ಸಾರ್ವಜನಿಕರಲ್ಲಿ ಗ್ರಾ.ಪಂ ಹಣಕಾಸಿನ ಕೊರತೆ ಇದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. 1ವರ್ಷದಿಂದ ಈಚೆ ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ, ಲೈಸೆನ್ಸು ಪೀಸ್ ಇನ್ನಿತರ ಮೂಲಗಳಿಂದ ಸಂಗ್ರಹವಾದ ಲಕ್ಷಗಟ್ಟಲೇ ಹಣ ಎಲ್ಲಿ ಹೋಯಿತು ?. MLC ಚುನಾವಣೆಯ ನೀತಿಸಂಹಿತೆ ಅವಧಿ ಡಿಸೆಂಬರ 14ಕ್ಕೆ ಮುಗಿದಿದ್ದರೂ ತುರ್ತು ಸೇವೆ ನೀಡಬೇಕಾದ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಸಾಮಾನ್ಯ ಸಭೆಯನ್ನೇ ನಡೆಸದಿರುವುದೇಕೆ ? ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ PDO ರವರು ಸ್ಪಂದನೆ ನೀಡುತ್ತಿಲ್ಲವೆಂದು ಕಾರಣ ಕೊಡುತ್ತಿರುವುದೇಕೆ ? ಗ್ರಾ.ಪಂ ಕಾನೂನಿನ ಪ್ರಕಾರ ಸಾಮಾನ್ಯ ಸಭೆಯನ್ನು ಕರೆಯುವ ಅಧಿಕಾರ ಗ್ರಾಮ.ಪಂ ಅಧ್ಯಕ್ಷರ ಪರಮಾಧಿಕಾರ. ಕಳೆದ 1 ವರ್ಷಗಳಿಂದ ಈಚೆಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾ.ಪಂನಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯದೇ ಇರುವುದು ಮತ್ತು ಅದಕ್ಕೆ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ ಎಂಬ ಆರೋಪ ಏಕೆ ? ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿರುವ 34 ಗ್ರಾ.ಪಂಗಳಲ್ಲಿ 33 ಗ್ರಾ.ಪಂಗಳ ಆಡಳಿತ ಸುಸೂತ್ರ ನಡೆಯುತ್ತಿದ್ದು ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ ಈದು ಗ್ರಾ.ಪಂ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ಎಂಬುವುದಾಗಿ ಈದು ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪುರುಷೋತ್ತಮ ರಾವ್ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.