



ಕಾರ್ಕಳ :ಆರೋಗ್ಯಾಧಿಕಾರಿಗೆ ವ್ಯಕ್ತಿಯೊಬ್ಬರು ಬೆದರಿಸಿ ನಿಂದಿಸಿದ ಘಟನೆ ಕಾರ್ಕಳ ಪುರಸಭೆಯಲ್ಲಿ ಗುರುವಾರ ನಡೆದಿದೆ. ಉಮೇಶ್ ಕಲ್ಲೊಟ್ಟೆ ಎಂಬಾತ ಕಾರ್ಕಳ ಪುರಸಭೆಯ ಆರೋಗ್ಯ ನಿರೀಕ್ಷಕಿ ಲೈಲಾ ಥೋಮಸ್ ಎಂಬವರಿಗೆ ಬೆದರಿಕೆ ಹಾಕಿದ ವ್ಯಕ್ತಿ
ಪುರಸಭೆಯಲ್ಲಿ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸುತಿರುವ ಲೈಲಾ ಥೋಮಸ್ ಗುರುವಾರ ಕಛೇರಿ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಉಮೇಶ್ ಕಲ್ಲೊಟ್ಟೆ , ನಾನು ಈ ಹಿಂದೆ ಆಡು ಮತ್ತು ಕುರಿ ಮಾಂಸದ ಅಂಗಡಿ ನಡೆಸಲು ಟ್ರೇಡ್ ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸಿದ್ದರೂ ಕೂಡ ಈವರೆಗೆ ನನಗೆ ಯಾಕೆ ಟ್ರೇಡ್ ಲೈಸೆನ್ಸ್ ನೀಡಿರುವುದಿಲ್ಲ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿರುತ್ತಾನೆ. ಟ್ರೇಡ್ ಲೈಸೆನ್ಸ್ ನೀಡುವ ಬಗ್ಗೆ ನಮ್ಮ ಮೇಲಾಧಿಕಾರಿಯವರಲ್ಲಿ ಕೇಳುವಂತೆ ತಿಳಿಸಿದಾಗ ತನಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.