



ಬೆಂಗಳೂರು: ಏಳು ಮಂದಿ ನಾಪತ್ತೆ ಯಾದ ಮಕ್ಕಳ ಪೈಕಿ ಮೂರು ಮಂದಿ ಮಕ್ಕಳು ಪತ್ತೆಯಾಗಿದ್ದು ಇನ್ನೂ ನಾಲ್ಕು ಮಕ್ಕಳ ಪತ್ತೆಗಾಗಿ ಬಲೆಬೀಸಿದ್ದಾರೆ. ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ. ಪೇಪರ್ ಹಂಚುವ ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಮಕ್ಕಳನ್ನು ರಕ್ಷಿಸಲಾಗಿದೆ. ಪರೀಕ್ಷಿತ್, ಕಿರಣ್ ಮತ್ತು ನಂದನ್ ಎಂಬ ಬಾಲಕರು ಇದೀಗ ಸುರಕ್ಷಿತರಾಗಿದ್ದಾರೆ.
ಸೋಲದೇವನಹಳ್ಳಿಯ ನಾಲ್ವರು ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಾಹಿತಿಗಳು ಲಭ್ಯವಾಗಿದೆ. ನಾಲ್ವರು ಮಕ್ಕಳು ಮಂಗಳೂರಿಗೆ ಹೋಗಿರುವ ಮಾಹಿತಿ ಸಿಕ್ಕಿದೆ. ಮನೆಯಲ್ಲಿನಾಪತ್ತೆಯಾಗುವ ಮುನ್ನ ಮಕ್ಕಳು ಬರೆದಿಟ್ಟಿರುವ ಚೀಟಿ ಪತ್ತೆಯಾಗಿದೆ
ಅದರಲ್ಲಿ ಊಟದ ಸಾಮಾಗ್ರಿ, ಬಟ್ಟೆಗಳು, ಆಧಾರ್ ಸೇರಿದಂತೆ ದಾಖಲಾತಿಗಳ ಆರು ಪ್ರತಿ ಮತ್ತು ಚಿನ್ನ, ಹಣ, ನೀರಿನ ಬಾಟಲಿ, ಟವಲ್, ಬ್ರಷ್, ಕ್ರೀಮ್, ಪೇಸ್ಟ್, ಬಾಚಣಿಕೆ, ಚಪ್ಪಲಿ, ಮ್ಯಾಟ್, ಪಾತ್ರೆಗಳು, ಸೀಮೆಎಣ್ಣೆ ಗ್ಯಾಸ್, ವ್ಯಾಕ್ಸಿನೇಷನ್ ಸರ್ಟಿಫಿಕೇಟ್, ತಲೆದಿಂಬು, ಬೆಡ್‌ಶೀಟ್, ಉಡುಗೊರೆಗಳು ತರಬೇಕು ಎಂದು ಉಲ್ಲೇಖ ಮಾಡಲಾಗಿದೆ. ಬಹುದಿನದ ಟ್ರಿಪ್ ಮಾಡೋ ಪ್ಲಾನ್‌ನಲ್ಲಿ ಮಕ್ಕಳು ಪಟ್ಟಿ ತಯಾರಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.