



ಕಾರ್ಕಳ :ಕಾರ್ಕಳದ ಪ್ರತಿಷ್ಠಿತ ಕಾಲೇಜಿನ ಸೂಪರ್‌ವೈಸರ್ ನ ಕಿರುಕುಳಕ್ಕೆ ಬೇಸತ್ತ ಮಹಿಳಾ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಸುನೀತಾ (33) ಆತ್ಮಹತ್ಯೆಗೆ ಯತ್ನಿಸಿದವರು
ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಕೊಂಡಿದ್ದು ಅವರು ಕೆಲಸಕ್ಕೆ ಸೇರಿದ ಒಂದು ತಿಂಗಳ ಬಳಿಕ ಕಾಲೇಜಿನಲ್ಲಿ ಸೆಕ್ಯುರಿಟಿ ಸೂಪರ್‌ವೈಸರ್ ಆಗಿ ಕೆಲಸ ಮಾಡಿಕೊಂಡಿರುವ ಹಿರಿಯಣ್ಣ ಎಂಬವರು ಜಾತಿ ನಿಂದನೆ ಮಾಡುತ್ತಾ ಬಂದಿದ್ದು ಸಣ್ಣಪುಟ್ಟ ವಿಚಾರಕ್ಕೂ ಕುಮಾರಿ ಕಿರಿಕಿರಿ ಮಾಡುತ್ತಿದ್ದು
ಕೆಲಸದ ವೇಳೆಯಲ್ಲಿ ಕರ್ತವ್ಯ ಕ್ಕೆ ಬೆಲೆ ನೀಡದೆ ವಿವಿಧ ಇತರ ಕೆಲಸಗಳಿಗೆ ಬೆಲೆ ನೀಡುತಿದ್ದಿ ಕೆಲಸ ಬಿಟ್ಟು ಮನೆಗೆ ನಡೆ ,ಕೆಲಸದಿಂದ ಕಿತ್ತು ತೆಗೆಯಲು ಗೊತ್ತು , ಎಂದು ಸುನಿತರಿಗೆ ಹಿರಿಯಣ್ಣ ಗದರಿಸುತಿದ್ದು ಇದರ ಬಗ್ಗೆ
ಈ ಬಗ್ಗೆ ಕುಮಾರಿ ಸುನೀತಾ ರವರು ಎರಡು ಬಾರಿ ನಿಟ್ಟೆ ಕಾಲೇಜಿನ ಮೇಲಾಧಿಕಾರಿಯವರಿಗೆ ದೂರು ನೀಡಿದ್ದರು.
ಆದರೆ
ಇದರಿಂದ ನೊಂದ ಸುನೀತಾರವರು ಕಾಲೇಜಿನಲ್ಲಿ ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡಿದ್ದು ಬಳಿಕ ಅವರನ್ನು ಕಾರ್ಕಳ ಸರಕಾರಿಗೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.