



ಅಮೆರಿಕ: ಟೈಟಾನಿಕ್ ಹಡಗಿನ ಅವಶೇಷಗಳ ಬಳಿ ಟೈಟಾನ್ ಸಬ್‌ಮೆರೈನ್ ಸ್ಫೋಟಗೊಂಡಿರುವುದರಿಂದ ಸಬ್‌ಮೆರೈನ್‌ನಲ್ಲಿದ್ದ ಎಲ್ಲಾ ಐವರೂ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಹೇಳಿದೆ.
ನಮ್ಮ ಸಿಇಒ ಸ್ಟಾಕ್‌ಟನ್ ರಶ್, ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ದಾವೂದ್, ಹಮಿಶ್ ಹಾರ್ಡಿಂಗ್ ಮತ್ತು ಪಾಲ್-ಹೆನ್ರಿ ನಾರ್ಜಿಯೊಲೆಟ್ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ಓಷನ್ ಗೇಟ್ OcaenGate ತಿಳಿಸಿದೆ.
ಟೈಟಾನಿಕ್ ಅವಶೇಷಗಳ ಬಳಿ ಸಮುದ್ರತಳದಲ್ಲಿ ಕಳೆದುಹೋದ ಟೈಟಾನ್‌ನ ಅವಶೇಷಗಳನ್ನು ಜಲಾಂತರ್ಗಾಮಿ ರೋಬೋಟ್ ಕಂಡುಹಿಡಿದಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಬಹಿರಂಗಪಡಿಸಿದೆ.
ಟೈಟಾನಿಕ್ ಅವಶೇಷದ ಸ್ಥಳದಿಂದ ಸುಮಾರು 1600 ಅಡಿಗಳಷ್ಟು ಆಳದಲ್ಲಿ ಟೈಟಾನ್‌ನ ಭಾಗಗಳು ಕಂಡುಬಂದಿವೆ ಎಂದು ರಿಯರ್ ಅಡ್ಮಿರಲ್ ಮೌಗರ್ ದೃಢಪಡಿಸಿದ್ದಾರೆ. 3-4 ದಿನದಿಂದ ಅಮೆರಿಕ ಹಾಗೂ ಕೆನಡಾ ಕರಾವಳಿಯಲ್ಲಿ ನಿರಂತರವಾಗಿ ನಡೆದ ಕಾರ್ಯಾಚರಣೆ ಕೊನೆಗೂ ಫಲ ನೀಡಿಲ್ಲ.
ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕರಾವಳಿ ಭಾಗದಿಂದ 400 ಮೈಲು ದೂರದಲ್ಲಿ ಬೃಹತ್ ಹಡಗು ಟೈಟಾನಿಕ್‌ನ ಅವಶೇಷ ಬಿದ್ದಿವೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.