



ಸ್ವಾತಂತ್ರ್ಯ ಎಂದರೆ ಎಲ್ಲಾ ರೀತಿಯ ಬಂಧನಗಳಿಂದ ಮುಕ್ತವಾಗುವುದಾಗಿದೆ. ನಮ್ಮ ದೇಶ ಭಾರತ ಸ್ವಾತಂತ್ರವನ್ನು ಪಡೆದು ಇಂದಿಗೆ 78 ವರ್ಷಗಳ ಸಂಭ್ರಮಾಚರಣೆಯನ್ನು ಮಾಡುತ್ತಿರುವ ಸಮಯವಾಗಿದೆ.
ಸ್ವತಂತ್ರ ಎನ್ನುವುದು ಸ್ವಾತಂತ್ರ್ಯ ಪೂರ್ವ ದಿನಗಳಲ್ಲಿ ನಮ್ಮ ದೇಶಕ್ಕೆ ತುಂಬಾ ಮುಖ್ಯವಾಗಿತ್ತು. ಸ್ವಾತಂತ್ರ್ಯ ಗಳಿಸಿದ ಬಳಿಕ ಭಾರತದ ಪ್ರತಿಯೊಂದು ಪ್ರಜೆಗೂ ಹೊಸ ಯುಗದ ಆರಂಭವಾಗಿತ್ತು. ಅಂದಿನ ಬಂಧನ ಗುಲಾಮಗಿರಿ ಭ್ರಷ್ಟಾಚಾರವನ್ನು ಇವೆಲ್ಲವುಗಳಿಂದ ಮುಕ್ತವಾಗಿ ಸ್ವತಂತ್ರವನ್ನು ಅನುಭವಿಸಿದ ದಿನ. ಆಗಸ್ಟ್ 15 1947ರಂದು ಬ್ರಿಟಿಷರ ವಸಾಹತುಶಾಹಿ ಅಂತ್ಯವಾಗಿ ಭಾರತದಲ್ಲಿ ಪ್ರಜಾಸತಾತ್ಮಕ ಗಣರಾಜ್ಯದ ಉಗಮದ ದಿನವೆಂದು ಗುರುತಿಸಲಾಗಿದೆ.

ಈ ದಿನಕ್ಕಾಗಿ ಹಲವಾರು ರಾಜರು ರಾಣಿಯರು ಹಾಗೆ ಸ್ವತಂತ್ರ ಹೋರಾಟಗಾರರು ಹಂಬಲಿಸಿದ್ದಾರೆ, ಹೋರಾಟ ನಡೆಸಿದ್ದಾರೆ, ಆ ಹೋರಾಟದಿಂದ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಮಹಾನುಭಾವರಾಗಿದ್ದಾರೆ. ಈ ಮಹಾನುಭಾವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ದೆಹಲಿಯ ಅಗಸ್ಟ್ 15ರ ಪ್ರತಿವರ್ಷ ದೇಶದ ಪ್ರಧಾನ ಮಂತ್ರಿಗಳು ಧ್ವಜವನ್ನು ಹಾರಿಸಿ ನಂತರ ಅದನ್ನು ಉದ್ದೇಶಿಸಿ ಭಾಷಣವನ್ನು ಮಾಡುತ್ತಾರೆ.

ಈ ಸ್ವತಂತ್ರ ದಿನಾಚರಣೆಯನ್ನು ಮಕ್ಕಳ ರೀತಿಯಲ್ಲಿ ನೋಡಿದರೆ ಈ ದಿನ ಅವರಿಗೆ ಹಬ್ಬವಿದ್ದಂತೆ. ಆ ದಿನದ ಹಿಂದಿನ ದಿನಗಳಲ್ಲಿ ನಡೆಯುವ ಸ್ಪರ್ಧೆಗಳು ಆ ದಿನಕ್ಕಾಗಿ ನಡೆಸುವ ತಯಾರಿ ಇವೆಲ್ಲವುಗಳ ಖುಷಿಯೇ ಬೇರೆ. ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಗಳಲ್ಲಿ ಧ್ವಜವನ್ನು ಹಾರಿಸಿ ನಂತರ ಅಲ್ಲಿ ಸಿಹಿಯನ್ನು ಹಂಚಲಾಗುತ್ತದೆ. ಆ ದಿನದ ಸಂಜೆ ನೃತ್ಯ, ತದ್ಭವೇಷ, ಭಾಷಣ ಹಾಗೆಯೇ ಹಿಂದಿನ ದಿನಗಳಲ್ಲಿ ನಡೆದಂತಹ ಆಟೋ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಆ ಸಮಯದಲ್ಲಿ ಮಾಡಲಾಗುತ್ತದೆ. ಆ ಮಕ್ಕಳಿಗೆಇವೆಲ್ಲ ಪಡೆಯುವ ಖುಷಿಯೇ ಬೇರೆ..
-ಸುರಕ್ಷಾ ಜರ್ನಲಿಸಂ ವಿದ್ಯಾರ್ಥಿನಿ ಎಂ.ಪಿ.ಎಂ ಕಾಲೇಜು ಕಾರ್ಕಳ




ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.