



ಉಡುಪಿ,: ಜಿಲ್ಲಾ ಪಂಚಾಯತ್‌ನ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನ ಪಡೆಯಲು ಅರ್ಹ ಹೊಸ ಕುಟುಂಬಗಳ ಫಲಾನುಭವಿಗಳೇ ನೇರವಾಗಿ ಆನ್‌ಲೈನ್ ಮೂಲಕ ಎಸ್.ಬಿ.ಎಮ್-ಜಿ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳು ಎಸ್.ಬಿ.ಎಮ್-ಜಿ ಪೋರ್ಟಲ್‌ನಲ್ಲಿ ಲಭ್ಯವಿರುವ ಸಿಟಿಜನ್ ಕಾರ್ನರ್ ಮತ್ತು ವಾಟ್ಸ್ ನಿವ್ ಅಥವಾ https://sbm.gov.in/sbmphase2/homenew.aspx ಪೋರ್ಟಲ್‌ನಲ್ಲಿ ನೋಂದಾಯಿಸಿ, ಲಾಗಿನ್ ಐಡಿ ಹಾಗೂ ಪಾಸ್‌ವರ್ಡ್ ಬಳಸಿಕೊಂಡು, ಅರ್ಜಿಯಲ್ಲಿ ಫಲಾನುಭವಿಗಳ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ವಿವರಗಳನ್ನು ದಾಖಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಯುನಿಕ್ ರೆಫರೆನ್ಸ್ ಸಂಖ್ಯೆಯನ್ನು ರಚಿಸಲಾಗುತ್ತದೆ. ಇದರಿಂದ ಅರ್ಜಿಯ ಅನುಮೋದನೆಯ ಪ್ರಗತಿಯನ್ನು ಟ್ರಾö್ಯಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಸಮಾಲೋಚಕರು ಮೊಬೈಲ್ ನಂ. 9632717452 ಅಥವಾ ಹತ್ತಿರದ ಗ್ರಾಮ ಪಂಚಾಯತ್ ನ್ನು ಸಂಪರ್ಕಿಸುವAತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.