



ಕಾರ್ಕಳ: ಮಲ್ಪೆ ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಯು ಟೋಲ್ ಮುಕ್ತ ವಾಗಿದ್ದು ನೇರವಾಗಿ ಕೇಂದ್ರ ಸರಕಾರವೇ ಹಣ ಬಿಡುಗಡೆ ಗೊಳಿಸಿದೆ. ಮಲ್ಪೆ ಹೆಬ್ರಿ ವರೆಗಿನ ರಸ್ತೆ ಅಗಲೀಕರಣ ಕ್ಕಾಗಿ ಒಟ್ಟು 455.75 ಕೋಟಿ ರೂಪಾಯಿ ಗಳು ಮಂಜೂರಾಗಿಸಿದ್ದು ಮುಂದಿನ ಎರಡು ವರ್ಷಗಳ ಒಳಗೆ ಹೆದ್ದಾರಿ ಕಾಮಗಾರಿ ಮುಗಿಸಿ ಸಂಚಾರಕ್ಕೆ ಮುಕ್ತ ವಾಗಲಿದೆ . ಉಡುಪಿ ಹಾಗೂ ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ವು ವೇಗವಾಗಿ ಬೆಳೆಯಲಿದೆ . ಉದ್ಯೋಗಾವಕಾಶಗಳನ್ನು ತೆರೆದುಕೊಳ್ಳಲು ಸಹಕಾರಿ ಯಾಗಲಿದೆ ಕರಾವಳಿ ಸಂಪರ್ಕಿಸುವ ಅಗುಂಬೆ ಚಾರ್ಮಾಡಿ ಶಿರಾಡಿ ರಸ್ತೆಗಳು ಅಭಿವೃದ್ಧಿ ಯಾಗಲಿವೆ. ಅದರ ಜೊತೆ ಕಾರ್ಕಳ ಧರ್ಮಸ್ಥಳ ಸುಬ್ರಹ್ಮಣ್ಯ ರಾಜ್ಯ ರಸ್ತೆಯನ್ನು ಉನ್ನತಿಕರಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ . ರಸ್ತೆ ಅಭಿವೃದ್ಧಿ ದೃಷ್ಟಿಯಲ್ಲಿ ಎಲ್ಲರೂ ಸಹಕಾರ ಅಗತ್ಯ ಎಂದು ಕೇಂದ್ರ ಸಚಿವೆ ಶೋಭಕರಂದ್ಲಾಜೆ ಹೇಳಿದರು ಅವರು ಪೆರ್ಡೂರಿನಲ್ಲಿ ಸುದ್ದಿಗಾರರೊಡನೆ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.