



ನವದೆಹಲಿ: ವರ್ಷದ ಮೊದಲ ಚಂದ್ರಗ್ರಹಣ ಮೇ 15 ಮತ್ತು 16 ರಂದು ನಡೆಯಲಿದೆ. ಭಾರತೀಯ ಕಾಲಮಾನ ಸೋಮವಾರ ಬೆಳಗ್ಗೆ 7.02ಕ್ಕೆ ಗ್ರಹಣ ಆರಂಭವಾಗಲಿದೆ. ಬೆಳಿಗ್ಗೆ 7.57 ರಿಂದ ಭೂಮಿಯ ನೆರಳು ಚಂದ್ರನ ಮೇಲೆ ಬೀಳಲು ಪ್ರಾರಂಭಿಸುತ್ತದೆ. ಮಧ್ಯಾಹ್ನ 12.20ಕ್ಕೆ ಗ್ರಹಣ ಮುಗಿಯುತ್ತದೆ. ಆದರೆ ಭಾರತದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ ದಕ್ಷಿಣ ಗೋಳಾರ್ಧದ ಭಾಗಗಳಲ್ಲಿ ಮಾತ್ರ ಗ್ರಹಣ ಸಂಭವಿಸಲಿದೆ. ಭಾರತ ಉತ್ತರ ಗೋಳಾರ್ಧದಲ್ಲಿದೆ
ಈ ಬಾರಿ ಚಂದ್ರಗ್ರಹಣದ ವೇಳೆ ಭೂಮಿಯ ನೆರಳು ಚಂದ್ರನ ಶೇ.99.1ರಷ್ಟು ಭಾಗವನ್ನು ಆವರಿಸಲಿದೆ. ಭೂಮಿಯ ವ್ಯಾಸವು ಚಂದ್ರನ 4 ಪಟ್ಟು ಹೆಚ್ಚು. ಹಾಗಾಗಿ ಅದರ ನೆರಳು ಚಂದ್ರನ ಮೇಲೆ ದೀರ್ಘಕಾಲ ಉಳಿಯುವ ಸಾಧ್ಯತೆ ಇದೆ. ಸಂಪೂರ್ಣ ಚಂದ್ರಗ್ರಹಣವು ಸುಮಾರು 104 ನಿಮಿಷಗಳವರೆಗೆ ಇರಲಿದೆ. ಚಂದ್ರನು ಕೆಲ ದೇಶಗಳಲ್ಲಿ ಕೆಂಪು ಮತ್ತು ಗಾಢ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಆದ್ದರಿಂದ ಚಂದ್ರಗ್ರಹಣವನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.