



ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ವತಿಯಿಂದ ಹೆಬ್ರಿ ತಾಲೂಕಿನ 14 ಸರ್ಕಾರಿ ಹಾಗೂ ಅನುದಾನಿತ ಶಾಲೆಗೆ ನೂತನವಾಗಿ ನೇಮಕವಾದ ಶಿಕ್ಷಕರಿಗೆ ತರಬೇತಿಯು ಹೆಬ್ರಿಯ ತಾಲೂಕು ಯೋಜನೆ ಕಚೇರಿಯಲ್ಲಿ ಯೋಜನಾಧಿಕಾರಿ ಲೀಲಾವತಿ ಅವರ ನೇತೃತ್ವದಲ್ಲಿ ನಡೆಯಿತು.
ಯೋಜನಾಧಿಕಾರಿ ಲೀಲಾವತಿ ಮಾತನಾಡಿ ಜೀವನದ ಮೌಲ್ಯಗಳು ಕಲಿಸಬೇಕು, ವಿದ್ಯಾರ್ಥಿಗಳು ತಪ್ಪು ದಾರಿ ಹಿಡಿದಾಗ ತಿದ್ದುವ ಕೆಲಸ ಮಾಡಬೇಕಾಗಿದೆ. ಕೇವಲ ಅಂಕಗಳಿಸುವಿಕೆ ಮಾತ್ರ ಶಿಕ್ಷಣವಾಗಿರದೆ. ಜೀವನ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸಿ ಎಂದರು.
ಸಮಾಜ ಕಂಟಕ ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮ ಹಾಗೂ ಗಿಡಮರಗಳನ್ನು ನೆಟ್ಟು ವಿದ್ಯಾರ್ಥಿಗಳು ಪೋಷಿಸಲು ಹೆಚ್ಚು ಹೊತ್ತು ನೀಡಬೇಕು. ಪೂಜ್ಯ ವೀರೇಂದ್ರ ಹೆಗಡೆ ಅವರು ಸಮಾಜದ ಒಳಿತಿಗಾಗಿ ಮಾಡುತ್ತಿರುವ ಜ್ಞಾನದೀಪ ಯೋಜನ ಯಶಸ್ವಿಯಾಗಿ ನಡೆಯಬೇಕೆಂದು ಲೀಲಾವತಿ ಕೇಳಿಕೊಂಡರು.
ಮ್ಯಾನೇಜರ್ ಪ್ರಮೀಳಾ, ಮೇಲ್ವಿಚಾರಕರಾದ ಉಮೇಶ್, ಸಂತೋಷ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.