logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಗೌರವ ಡಾಕ್ಟರೇಟ್ ಪುರಸ್ಕೃತ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಸನ್ಮಾನ

ಟ್ರೆಂಡಿಂಗ್
share whatsappshare facebookshare telegram
5 Dec 2023
post image

ಉಡುಪಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಗೌರವ ಡಾಕ್ಡರೇಟ್ ಪುರಸ್ಕೃತ ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಕಡೆಕಾರಿನ ಮೂಡನಿಡಂಬೂರು ಯುವಕ ಮಂಡಲ ರಿ. ಹಾಗೂ ನಿಡಂಬೂರು ಯುವಕ ಮಂಡಲ ಟ್ರಸ್ಟ್ ಸಹಭಾಗಿತ್ವದಲ್ಲಿ ಅದ್ದೂರಿ ಸನ್ಮಾನ ಕಾರ್ಯಕ್ರಮ ಭಾನುವಾರ ಯುವಕ ಮಂಡಲದ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು, ನಿಸ್ವಾರ್ಥ ಭಾವನೆಯಿಂದ ಮಾಡಿದ ಸೇವೆಯನ್ನು ಸಮಾಜ ಗುರುತಿಸಿರುವುದು ಸಂತೋಷ ತಂದಿದೆ. ಮಾನವ ತಾನು ಗಳಿಸಿದ ಸಂಪತ್ತಿನ ಒಂದು ಪಾಲನ್ನು ಸಮಾಜದ ಶ್ರೇಯಸ್ಸಿಗೆ ಮೀಸಲಿಡುವ ಮೂಲಕ ಸಮಾಜದ ಋಣ ತೀರಿಸುವ ಕಾರ್ಯ ಮಾಡಬೇಕು. ಪ್ರಶಸ್ತಿಗಾಗಿ, ಹೆಸರಿಗಾಗಿ ಸಮಾಜ ಸೇವೆ ಮಾಡುವುದು ಭೂಷಣವಾಗದು ಎಂದರು. ಇಂದು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಕಡಿಮೆಯಾಗುತ್ತಿರುವುದು,ತಂಡೆತಾಯಿ ವೃದ್ದಾಪ್ಯದಲ್ಲಿ ವೃದ್ಧಾಶ್ರಮವನ್ನು ಸೇರುವ ಪ್ರಸಂಗಗಳನ್ನು ಕಂಡಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಇದಕ್ಕೆ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಕುಸಿತವಾಗಿರುವುದೇ ಕಾರಣ. ಈ ದ್ರಷ್ಠಿಯಿಂದ ತಾನು ಜಿಲ್ಲೆಯ ಇನ್ನೂರಕ್ಕೂ ಅಧಿಕ ಶಾಲಾ ಕಾಲೇಜುಗಳಿಗೆ ತೆರಳಿ ನೈತಿಕ ಮೌಲ್ಯವನ್ನು ಬಿತ್ತುವ ಮೂವತ್ತು ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ವಿತರಿಸಿದ್ದೇನೆ. ಇಂತಹ ಕಾರ್ಯಗಳನ್ನು ನಡೆಸಲು ಸಂಘಸಂಸ್ಥೆಗಳು ಮುಂದೆಬಂದಾಗ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು. ಮೂಡನಿಡಂಬೂರು ಯುವಕ ಮಂಡಲ ಸಾರ್ಥಕ 60 ಸಂವತ್ಸರಗಳನ್ನು ಕಂಡಿರುವುದು ಹೆಮ್ಮೆಯ ಸಂಗತಿ. ಇಂತಹ ಪ್ರತಿಷ್ಟಿತ ಸಂಸ್ಥೆಯಿಂದ ಗೌರವ ಸ್ವೀಕರಿಸಿರುವುದು ಸಂತೋಷ ತಂದಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿಡಂಬೂರು ಯುವಕ ಮಂಡಳ ಟ್ರಸ್ಡೊನ ಅಧ್ಯಕ್ಷ ಕೆ.ಶ್ರೀನಿವಾಸ ಹೆಗ್ಡೆ ಅವರು ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ನಿಡಂಬೂರಿನ ಅಳಿಯರಾಗಿರುವುದು ಹೆಮ್ಮೆಯ ಸಂಗತಿ. ಇ‌ಂತಜ ಮಹಾನ್ ಸಾಧಕನಿಗೆ ಗೌರವಾರ್ಪಣೆ ಮಾಡಿರುವುದು ಸಂಘದ ಗೌರವವನ್ನುಹೆಚ್ಚಿಸಿದೆ. ಯುವಕ ಮಂಡಲದ ಕಾರ್ಯಚಟುವಟಿಕೆಗಳಿಗೆ ಅವರು ನೀಡಿರುವ ಪ್ರೋತ್ಸಾಹ ಅಭಿನಂದನೀಯ ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಅನೇಕ ಸಂಘಸಂಸ್ಥೆಗಳ ಅಧ್ಯಕ್ಷರಾಗಿ ಸಮರ್ಥವಾಗಿ ಮುನ್ನಡೆಸಿದ ಡಾ.ತಲ್ಲೂರು ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರ ಅಗತ್ಯವಿದೆ. 60 ವರ್ಷಗಳ ಸಾರ್ಥಕತೆಯನ್ನು ಕಂಡಿರುವ ಮೂಡನಿಡಂಬೂರು ಯುವಕ ಮಂಡಲ ರಾಜ್ಯಕ್ಜೇ ಮಾದರಿಯಾಗಿದೆ. ತನ್ನ ತಮ್ಮ ಚಟುವಟಿಕೆಗಳಿಂದ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಮಾತನಾಡಿ, ಮಾನವ ಜೀವನ ಶ್ರೇಷ್ಠ. ಸಮಾಜದಲ್ಲಿ ದೀನರಿಗೆ, ಸಂಕಷ್ಟದಲ್ಲಿರುವವರಿಗೆ ನಾವು ಯಾವತ್ತೂ ನೆರವಿನ ಹಸ್ತ ಚಾಚಬೇಕು. ಈ ನಿಟ್ಟಿನಲ್ಲಿ ಡಾ.ತಲ್ಲೂರು ಮಾದರಿಯಾಗಿದ್ದಾರೆ. ಅವರು ನಾಡಿನ ಜಾನಪದ, ಸಂಸ್ಕ್ರತಿಗೆ ನೀಡುತ್ತಿರುವ ಕೊಡುಗೆ ಬೆರಗು ಹುಟ್ಟಿಸಿದೆ.ತೆರೆಯ ಮರೆಯ ಕಾಯಿಯಂತೆ ಯಾವ ಪ್ರಚಾರವನ್ನು ಬಯಸದೆ ಸಮಾಜ ಸೇವೆ ಮಾಡುತ್ತಿದ್ದಾರೆ. ಅವರ ಸಾಮಾಜಿಕ ಕಳಕಳಿ ಶ್ಲಾಘನೀಯ. ಸಮಾಜಕ್ಕೆ ಅವರ ಮಾರ್ಗದರ್ಶನ ನಿರಂತರವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕಡೆಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶಾಸಕ ಯಶಪಾಲ್ ಸುವರ್ಣ ಹಾಗೂ ಕಡೆಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಕರ ಶೇರಿಗಾರ್, ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಅವರಿಗೆ ಗೌರವಾರ್ಪಣೆ ನಡೆಯಿತು.

ಕಾರ್ಯಕ್ರಮದಲ್ಲಿ ತಲ್ಲೂರು ಪ್ಯಾಮಿಲಿ ಟ್ರಸ್ಟಿನ ಟ್ರಸ್ಟಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ಕಡೆಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಕರ ಶೇರಿಗಾರ್, ರ್ನಡಂಬೂರು ಯುವಕ ಮಂಡಲದ ಗೌರವಾಧ್ಯಕ್ಷ ರವೀಂದ್ರ ಕೆ.ಪೂಜಾರಿ ಉಪಸ್ಥಿತರಿದ್ದರು. ಯುವಕ ಮಂಡಲದ ಗೌರವಾಧ್ಯಕ್ಷ ಜಯಕರ ಸುವರ್ಣ ಸ್ವಾಗತಿಸಿ, ವಿಜಯ ಕಡೆಕಾರ್ ನಿರೂಪಿಸಿದರು. ದೀಪಕ್ ರಾಜ್ ವಾಚಿಸಿದರು. ಶೇಖರ್ ಅಂಚನ್ ಪರಿಷಯಿಸಿದರು. ಗಿರಿಜಾ ಸರ್ಜಿಕಲ್ ಹೆಲ್ತ್ಕೇರ್ ಸಂಸ್ಥೆಯ ಮುಖ್ಯಸ್ಥ ರವೀಂದ್ರ ಶೆಟ್ಟಿ ವಂದಿಸಿದರು.

ಈ ಸಂದರ್ಭದಲ್ಲಿ ಅಭಿಜ್ಞಾ ನೃತ್ಯಭೂಮಿ ಟ್ರಸ್ಟ್ ಉಡುಪಿಯ ನೃತ್ಯ ವಿದುಷಿ ಡಾ.ರಶ್ಮಿ ಗುರುಮೂರ್ತಿ ಮತ್ತು ಶಿಷ್ಯ ವೃಂದದವರಿಂದ ನೃತ್ಯ ವೈಭವ ಹಾಗೂ ಕಡೆಕಾರು ಬಿಲ್ಲವ ಸಂಘಧ ಮಹಿಳಾ ಘಟಕದ ಸದಸ್ಯೆಯರಿಂದ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆದವು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.