logo
WhatsApp Image 2026-04-02 at 14.46.04.jpeg
hindalco everlast.jpeg

ಕಾರ್ಕಳದಲ್ಲಿ ಗುತ್ತಿಗೆದಾರರಿಂದ ತುಘಲಕ್‌ ದರ್ಬಾರ್‌ - ಕಾರ್ಕಳ ಬಿಜೆಪಿ ಖಂಡನೆ

ಟ್ರೆಂಡಿಂಗ್
share whatsappshare facebookshare telegram
21 Jun 2023
post image

ಕಾರ್ಕಳ : ಚುನಾವಣಾ ಫಲಿತಾಂಶದ ದಿನ ಒಂದು ಕ್ಷಣಕ್ಕೆ ತಾನೇ ವಿಜಯಿ ಆಗಿದ್ದೇನೆಂದು ಬೀ ಗಿದ ಕಾರ್ಕಳದ ಗುತ್ತಿಗೆದಾರರೊಬ್ಬರು ಅದರ ಗುಂಗಿನಿಂದ ಹಿಂಬರದೆ. ಕಾರ್ಕಳದ ಸಾರ್ವಜನಿಕೆ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿ ಹಾಗೂ ಇತರ ವೈದ್ಯರ ಹಾಗೂ ಸಿಬ್ಬಂಧಿಗಳ ಸಭೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ಧಿ ಹರಡಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಒಬ್ಬ ಯಾವುದೇ ಹಂತದ ಜನಪ್ರತಿನಿಧಿ ಅಲ್ಲದವರು ಈ ತರಹ ಇಲಾಖೆಯ ಸಭೆ ನಡೆಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅವಮಾನವಾಗಿದೆ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದಂದಿನಿಂದ ಕಾರ್ಕಳದಲ್ಲಿ ಒಬ್ಬರು ತಾನೇ ಜನಪ್ರತಿನಿಧಿಯ ತರಹ ನಕಲಿ ಜನಪ್ರತಿನಿಧಿಯಾಗಿ ತನ್ನ ತಂಡದೊಂದಿಗೆ ಯಾವುದಾದರೊಂದು ಇಲಾಖೆ ಕಛೇರಿಗೆ ಹೋಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿರುವುದು, ಕೇಳದಿದ್ದಲ್ಲಿ ವರ್ಗಾವಣೆ ಮಾಡುತ್ತೇವೆ ಎಂದು ಬೆದರಿಸುವುದು ವಿಪರ್ಯಾಸ.. ಒಂದು ವೇಳೆ ಇಂತಹ ಚಾಳಿ ಮುಂದುವರೆದಲ್ಲಿ ಈ ವಿಷಯವನ್ನೇ ಮುಂದಿಟ್ಟುಕೊಂಡು ಕಾರ್ಕಳ ಭಾರತೀಯ ಜನತಾ ಪಕ್ಷವು ಮುಂದಿನ ದಿನಗಳಲ್ಲಿ ಬೃಹತ್‌ ಪ್ರತಿಭಟನೆ ಮಾಡಬೇಕಾದೀತು ಎಂದು ಈ ಮೂಲಕ ಎಚ್ಚರಿಸುತ್ತೇವೆ. ಇಡೀ ಉಡುಪಿ ಜಿಲ್ಲೆಯ ಜನತೆ ಕಾಂಗ್ರೆಸ್‌ ಪಕ್ಷವನ್ನು ಎಲ್ಲಾ ಕಡೆ ತಿರಸ್ಕರಿಸಿದ್ದಾರೆ ಆದರೂ ತಾನೇ ಜನಪ್ರತಿನಿಧಿಗಳಂತೆ ವರ್ತಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ. ಯಾವುದೋ ಒಬ್ಬ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಸರಕಾರಿ ಕಛೇರಿಯಲ್ಲಿ, ಇಲಾಖೆಯಲ್ಲಿ ಸಭೆ ನಡೆಸಬಹುದಾದರೆ ಕಾರ್ಕಳದ ಒಟ್ಟು 8 ಜನ ಸೋತ ಅಭ್ಯರ್ಥಿಗಳೂ ಇದೇ ತರಹ ಇನ್ನು ಅನುಕರಣೆ ಮಾದಿದರೆ ಸರಕಾರಿ ಆಡಳಿತ ವ್ಯವಸ್ಥೆಯು ಕುಸಿಯುವ ಸಾಧ್ಯತೆ ಇದೆ. ಇಂತಹ ಬೆದರಿಕೆ ತಂತ್ರವನ್ನು ಮುಂದುವರೆಸಿದರೆ ಕಾರ್ಕಳ ಭಾರತೀಯ ಜನತಾ ಪಾರ್ಟಿಯು ಇದಕ್ಕೆ ತಕ್ಕುದಾದ ಪ್ರತಿಕ್ರಿಯೆಯನ್ನು ನೀಡಲಿದೆ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ ... ಹರೀಶ್ ಶನೊಯ್ ವಕ್ತಾರರು ಭಾರತೀಯ ಜನತಾ ಪಾರ್ಟಿ ಕಾರ್ಕಳ

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.