



ನವದೆಹಲಿ: ಭಾರತದ ಹೊರಗೂ ದ್ವಿಚಕ್ರ ವಾಹನಗಳ ತಯಾರಿಕೆಯ ಜಾಲವನ್ನು ವಿಸ್ತರಿಸುವ ಯೋಜನೆಯನ್ನು ಟಿವಿಎಸ್ ಮತ್ತು ಜರ್ಮನಿಯ ಬಿಎಂಡಬ್ಲೂ ಮೊಟೊರಾಡ್ ಹೊಂದಿವೆ ಎಂದು ಕಂಪನಿ ಬುಧವಾರ ಹೇಳಿದೆ.
ಜಾಗತಿಕ ಮಾರುಕಟ್ಟೆಗೆ 500 ಸಿ.ಸಿ. ಒಳಗಿನ ದ್ವಿಚಕ್ರ ವಾಹನಗಳನ್ನು ತಯಾರಿಸುವ ಕುರಿತು ಈ ಎರಡೂ ಕಂಪನಿಗಳು 2013ರಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದವು. 310 ಸಿ.ಸಿ. ವಿಭಾಗದಲ್ಲಿ ಬಿಎಂಡಬ್ಲೂ ಜಿ 310ಆರ್, ಬಿಎಂಡಬ್ಲೂ 310 ಜಿಎಸ್, ಬಿಎಂಡಬ್ಲೂ ಜಿ 310 RR ಬೈಕ್‌ಗಳು ಒಳಗೊಂಡಿವೆ. ಈ ಬೈಕ್‌ಗಳು ಜಾಗತಿಕ ಮಟ್ಟದ 100 ಮಾರುಕಟ್ಟೆಗಳಲ್ಲಿ ಲಭ್ಯ. ಮತ್ತೊಂದೆಡೆ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಅಪಾಚೆ RR 310 ಮೋಟಾರ್‌ಸೈಕಲ್ ಕೂಡಾ ತಯಾರಿಸುತ್ತಿದೆ.
‘ಭವಿಷ್ಯದ ತಂತ್ರಜ್ಞಾನಕ್ಕೆ ಹಾಗೂ ಸುಸ್ಥಿರ ಪ್ರಯಾಣ ಮಾರ್ಗೋಪಾಯಕ್ಕಾಗಿ ಎರಡೂ ಕಂಪನಿಗಳು ಭಾರತದ ಹೊರಗೂ ಜಂಟಿಯಾಗಿ ಬೈಕ್‌ಗಳ ತಯಾರಿಸಲು ನಿರ್ಧರಿಸಿವೆ. ಇದರಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಬಿಎಂಡಬ್ಲೂ ಸಿಇ 02 ಬೈಕ್ ಕೂಡಾ ಸೇರಿದೆ’ ಎಂದು ಟಿವಿಎಸ್ ಮೋಟಾರ್ ಕಂಪನಿಯ ನಿರ್ದೇಶಕ ಹಾಗೂ ಸಿಇಒ ಕೆ.ಎನ್. ರಾಧಾಕೃಷ್ಣನ್ ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.