



ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯನ್ನು ಮತ್ತಷ್ಟು ಸ್ಮರಣೀಯವಾಗಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲರೂ ವ್ಯಾಟ್ಸ್ಆ್ಯಪ್ ಡಿಪಿ, ಸೋಶಿಯಲ್ ಮಿಡಿಯಾದಲ್ಲಿ ಪ್ರೊಫೈಲ್ ಪಿಕ್ ತ್ರಿವರ್ಣ ಧ್ವಜ ಹಾಕುವಂತೆ ಮೋದಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪ್ರೊಫೈಲ್ ಪಿಕ್‌ನ್ನು ತ್ರಿವರ್ಣ ಧ್ವಜವಾಗಿ ಬದಲಿಸಿತ್ತು.
ತ್ರಿವರ್ಣ ಧ್ವಜ ಹಾಕಿದ ಬೆನ್ನಲ್ಲೇ ಬಿಸಿಸಿಐ ಟ್ವಿಟರ್ ಖಾತೆಯಿಂದ ಬ್ಲೂಟಿಕ್ ತೆಗೆದುಹಾಕಲಾಗಿದೆ. ಟ್ವಿಟರ್ ಹೊಸ ನಿಯಮದ ಪ್ರಕಾರ ಬ್ಲೂಟಿಕ್ ತೆಗೆದುಹಾಕಿದೆ. ಹೊಸ ನಿಯಮದ ಪ್ರಕಾರ ಪ್ರೊಫೈಲ್ ಬದಲಿಸಿದರೆ ಟ್ವಿಟರ್ ಪರಿಶೀಲನೆ ನಡೆಸಿ ಅಧಿಕೃತ ಖಾತೆಯನ್ನು ಖಾತ್ರಿಪಡಿಸಿಕೊಳ್ಳಲಿದೆ. ಬಳಿಕ ಬ್ಲೂಟಿಕ್ ಮರಳಿ ನೀಡಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲ ದಿನಗಳು ಹಿಡಿಯಲಿದೆ.
ಸ್ವಾತಂತ್ರ್ಯ ದಿನಾಚರಣೆ ಬಳಿಕ ಮತ್ತೆ ಬಿಸಿಸಿಐ ತನ್ನ ಹಳೇ ಪ್ರೊಫೈಲ್ ಹಾಕಿದರೂ ಮತ್ತದೇ ಪ್ರಕ್ರಿಯೆ ಮುಂದುವರಿಯಲಿದೆ. ಈ ವೇಳೆ ಮತ್ತೆ ಬಿಸಿಸಿಐ ಬ್ಲೂಟಿಕ್ ಮಾಯವಾಗಲಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.