



ನವದೆಹಲಿ: ಟ್ವಿಟರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಟೆಸ್ಲಾ ಸಿಎಒ ಎಲಾನ್ ಮಸ್ಕ್ ಸಾಕಷ್ಟು ಬದಲಾವಣೆಗಳನ್ನು ತರುತ್ತಿದ್ದು, ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಶನಿವಾರ ರಾತ್ರಿಯಿಂದ ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಟ್ವಿಟರ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರಿಂದ ದೂರುಗಳು ಕೇಳಿಬರುತ್ತಿವೆ.
ಸೈಟ್ ರಿಫ್ರೆಶ್ ಆಗುತ್ತಿಲ್ಲ ಎಂದು ಗ್ರಾಹಕರು ಪರದಾಡುತ್ತಿದ್ದಾರೆ. ಮಸ್ಕ್ ಒಡೆತನದ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಈ ವರ್ಷ ಎದುರಿಸುತ್ತಿರುವ ಮೂರನೇ ಟ್ವಿಟರ್ ಸರ್ವರ್ ಡೌನ್ ಇದಾಗಿದೆ.
ಟ್ವಿಟರ್ ಬಳಸುವ ಬಹುತೇಕ ಜನರು ಪೇಜ್ ಲೋಡ್ ಆಗದೆ ಸಮಸ್ಯೆ ಎದುರಿಸುತ್ತಿದ್ದಾರೆ. ‘Something went wrong. Try reloading’ ಹಾಗೂ ‘cannot retrieve tweets’ ಎಂದು ಬರುತ್ತಿದೆ. ಮೊಬೈಲ್ ಆ್ಯಪ್‌ನಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸುವವರಿಗೆ “Cannot Retrieve Tweets” ಎಂಬ ಎರರ್ ಬರುತ್ತಿದೆ.
ಡೌನ್ ಡಿಟೆಕ್ಟರ್ ಮಾಡಿರುವ ವರದಿಯ ಪ್ರಕಾರ, ಸುಮಾರು 4,000 ಬಳಕೆದಾರರು ಟ್ವಿಟರ್‌ನ ಕಾರ್ಯನಿರ್ವಹಣೆಯ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಟ್ವಿಟರ್ ಈ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಟ್ವಿಟರ್ನಲ್ಲೇ ಟ್ವಿಟರ್ ಡೌನ್ ಎಂಬ ಹ್ಯಾಷ್ಟಾಗ್ ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿದ್ದು 25 ಸಾವಿರಕ್ಕೂ ಅಧಿಕ ಮಂದಿ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಸರ್ವರ್ ಸಮಸ್ಯೆ ಸರಿಹೋಗದಿದ್ದರೆ ಬಳಕೆದಾರರು ಮತ್ತಷ್ಟು ಆಕ್ರೋಶಗೊಳ್ಳುವ ಸಾಧ್ಯತೆಗಳಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.