



ವಾಷಿಂಗ್ಟನ್: ಟ್ವಿಟರ್ ತನ್ನ ಅಕ್ಷರಗಳ ಮಿತಿ ಹೆಚ್ಚಿಸಲು ಬಯಸಿದೆ. 280ಅಕ್ಷರಗಳಿಂದ 2,500ಕ್ಕೆ ಹೆಚ್ಚಿಸಲು ಕಾರ್ಯ ನಿರತವಾಗಿದೆ. ಒಂದೇ ಟ್ವೀಟ್‌ನಲ್ಲಿ ಸುಮಾರು 2,500ಪದಗಳನ್ನು ಬಳಸಬಹುದು. ಈ ನಿಟ್ಟಿನಲ್ಲಿ `ನೋಟ್ಸ್’ ಎಂಬ ಹೊಸ ಫೀಚರ್ ಅನ್ನು ಪರಿಚಯಿಸಲಾಗುವುದು. ಈ ವೈಶಿಷ್ಟ್ಯವು ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಲಭ್ಯವಾದ ನಂತರ, ಬಳಕೆದಾರರು ತಮ್ಮದೇ ಆದ ದೀರ್ಘ ಸಂದೇಶಗಳನ್ನು ಪೋಸ್ಟ್ ಮಾಡಬಹುದು.
ಇದರ ಜೊತೆಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಕೂಡ ಸೇರಿಸಬಹುದು. ಈ ಹೊಸ ವೈಶಿಷ್ಟ್ಯವು Twitter ಟೈಮ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ನೀವು ಮಾಡುವ ಈ ದೀರ್ಘ ಟ್ವೀಟ್ ಪೂರ್ವವೀಕ್ಷಣೆಯನ್ನು ಸಹ ನೀವು ಪರಿಶೀಲಿಸಬಹುದು. ಟ್ವಿಟರ್ ಈಗಾಗಲೇ ಯುಎಸ್, ಯುಕೆ, ಕೆನಡಾ ಮತ್ತು ಘಾನಾದಲ್ಲಿ ಪ್ರಾಯೋಗಿಕ ಹಂತದಲ್ಲಿದೆ, ಯಶಸ್ವಿಯಾದ ಬಳಿಕ ವಿಶ್ವಾದ್ಯಂತ ಸಾರ್ವಜನಿಕ ರಿಗೆ ಉಪಯೋಗ ಮುಕ್ತ ವಾಗಲಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.