



ರೋಮ್: ಇಟಲಿಯಲ್ಲಿ ಭೀಕರ ದುರಂತ ಸಂಭವಿಸಿದೆ. ತರಬೇತಿ ನಿರತವಾಗಿದ್ದ ಎರಡು ಯುದ್ಧ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ.
ಒಂದು ವಿಮಾನ ಡಿಕ್ಕಿ ಹೊಡೆದ ಬಳಿಕ ಜನ ವಸತಿ ಪ್ರದೇಶದಲ್ಲಿರುವ ಕಾರಿನ ಮೇಲೆ ಬಿದ್ದಿದೆ. ಇನ್ನೊಂದು ವಿಮಾನ ಹೊಲದಲ್ಲಿ ಅಪ್ಪಳಿಸಿದೆ ಎಂದು ವರದಿಯಾಗಿದೆ.
ಅಮೆರಿಕ ನಿರ್ಮಿತ ಯು- 208 ವಿಮಾನ ಪತನಗೊಂಡಿದ್ದು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ವಿಮಾನ ದುರಂತವನ್ನು ಖಚಿತಪಡಿಸಿದ್ದಾರೆ. ಅಪಘಾತದಲ್ಲಿ ಪ್ರಾಣ ಹಾನಿ ಸಂಭವಿಸಿರುವುದಕ್ಕೆ ಅವರು ಸಂತಾಪ ಸೂಚಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.