



ನವದೆಹಲಿ: ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಒಂದು ತಿಂಗಳಲ್ಲಿ ಶೇ. 72 ರಷ್ಟು ನೋಟುಗಳು (ಸುಮಾರು 2.62 ಲಕ್ಷ ಕೋಟಿ ರೂಪಾಯಿ ಹಣ) ಬ್ಯಾಂಕ್ ಗಳಿಗೆ ಜಮೆಯಾಗಿದೆ ಎಂದು ಆರ್ ಬಿಐ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇ 19 ರಂದು 2,000 ರು. ಮೌಲ್ಯದ ನೋಟುಗಳನ್ನು ಹಿಂಪಡೆಯುವುದಾಗಿ ಪ್ರಕಟಿಸಿತ್ತು. ಮೇ 23ರಿಂದ ಸೆ.30 ರೊಳಗೆ ಬ್ಯಾಂಕ್‌ಗಳಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ತಿಳಿಸಿತ್ತು.
ಬ್ಯಾಂಕ್ ಗಳ ಇತರ ಕೆಲಸಗಳಿಗೆ ಅಡ್ಡಿಯಾಗುವುದನ್ನು ತಪ್ಪಿಸಲು, ಯಾವುದೇ ಶಾಖೆಯಲ್ಲಿ ದಿನಕ್ಕೆ 20,000 ರೂಗಳ ಮಿತಿಯವರೆಗೆ ಮಾತ್ರ ನೋಟುಗಳನ್ನು ಬದಲಾಯಿಸಲ ಅವಕಾಶ ನೀಡಿತ್ತು.
ಸೆಪ್ಟೆಂಬರ್ ವರೆಗೆ ಅವಕಾಶ ಇದ್ದರೂ ಕೇವಲ ಒಂದು ತಿಂಗಳಲ್ಲಿ ಶೇ.72 ರಷ್ಟು ಎರಡು ಸಾವಿರ ರು. ಬೆಲೆಯ ನೋಟುಗಳು ಬ್ಯಾಂಕ್ಗಳಿಗೆ ಜಮೆಯಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.