



ಉಡುಪಿ : ಈ ಬಾರಿಯ ಉಚ್ಚಿಲ ದಸರ ಆಕರ್ಷಕವಾಗಿ ಮೂಡಿಬಂದಿದೆ. ಕೇವಲ ಎರಡು ದಿನ ಕಾಲ ಮಾತ್ರ ಬಾಕಿ ಇದ್ದು ವಸ್ತುಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ . ಮೀನುಗಾರಿಕಾ ಇಲಾಖೆಯ ಫಲಪುಷ್ಪ ಪ್ರದರ್ಶನ, ಐಟಿಡಿಸಿ, ಪ ವಾರ್ತಾ ಇಲಾಖೆ , ಪುಸ್ತಕ ಮಳಿಗಗಳು ಸೇರಿದಂತೆ ವಿವಿಧ ಪ್ರದರ್ಶನ ಗಳನ್ನು ನೋಡಲು ಜನರು ಆಗಮಿಸುತಿದ್ದಾರೆ

ಆಶ್ಚರ್ಯ ಚಕಿತರಾದ ಭಕ್ತಾಧಿಗಳು: ಉಚ್ಚಿಲ ದಸರದಲ್ಲಿ ಈ ಬಾರಿ ವಿಶೇಷ ವಾಗಿ ಮೀನುಗಾರಿಕಾ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಸಮುದ್ರ ಮೀನು ಮತ್ತು ಆಹಾರಗಳು, ಸಿಹಿ ನೀರಿನ ಮೀನುಗಳು, ಪಚ್ಚಲ ಕೃಷಿ, ಪಂಜರ ಕೃಷಿ ಪ್ರಾತ್ಯಕ್ಷಿಕೆ, ಅಲಂಕಾರಿಕ ಮೀನುಗಳ ಬಗ್ಗೆ ವೀಕ್ಷಣೆಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸಮುದ್ರ ದ ಮೀನುಗಳಾದ ಬಂಗುಡೆ, ತೊಂದೆ ಮೀನು, ಮಣ್ಣು ತೊರಕೆ, ಕಳ್ಳಿಗೋರೆ ಟೈಗಾರ್ ಪ್ರಾನ್ಸ್, ಈಲ್ ಫೀಶ್ , ಏರಿ ಮೀನು, ಪೈಯ್ಯೆ , ಕಟ್ರಿಮೀನು ... ಕೆಂಬೇರಿ ,,ತೊರಕೆ,ಚಾಂದ್ ಮೀನ್ , ಕೊಕ್ಕರ್ , ವೀಕ್ಷಣೆಗೆ ಸರತಿ ಸಾಲಿನಲ್ಲಿ ನಿಲ್ಲುತಿದ್ದಾರೆ.

ಬೃಹತ್ ಏಡಿ , ಜೀವಂತ ಮೀನುಗಳು ನೋಡಲು ಜನರ ದಂಡು: ಈ ಬಾರಿ ಮೀನುಗಳ ಪ್ರದರ್ಶನದ ಲ್ಲಿ ಒಂದು ವರೆ ಕೆಜಿ ತೂಕದ ಬೃಹತ್ ಗಾತ್ರದ ಏಡಿ ಆಕರ್ಷಣೀಯ ವಾಗಿದೆ. ಇದನ್ನು ನೋಡಲ ವಿದ್ಯಾರ್ಥಿಗಳು , ಮಕ್ಕಳು ಸೇರಿದಂತೆ ತಂಡೋಪ ತಂಡವಾಗಿ ನೋಡಿ ಮಂತ್ರಮುಗ್ದವಾಗಿಸಿದೆ.
ಬಂಗುಡೆ ಮೀನು ಸಮುದ್ರದಲ್ಲಿ ಮಾತ್ರ ಕಾಣಸಿಗುತಿದ್ದು ಅದರ ವೀಕ್ಷಣೆ ಬಲು ಕಷ್ಟ. ಅದರಲ್ಲು ತುಳುನಾಡಿನಲ್ಲಿ ಬಲು ಜನಪ್ರಿಯ ವಾಗಿರುವ ಬಂಗುಡೆ ಮೀನು ನೋಡಲು ಜನರ ದಂಡೆ ಸೇರುತ್ತಿದೆ. ಉಪ್ಪುನೀರಿನ ಸಾಕಾಣಿಕೆಯು ಸವಾಲು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದರು . ಮೀನುಗಾರಿಕಾ ಇಲಾಖೆ ಮಾತ್ರ ನೆರೆದ ಜನರಿಗೆ ಆಶ್ಚರ್ಯಚಕಿತರನ್ನಾಗಿಸಿದೆ.

ವಸ್ತು ಪ್ರದರ್ಶನ ವೆಂಬುದು ಹೊಸ ಹೊಸ ಪ್ರಯೋಗಗಳ ಪ್ರಯೋಗ ಶಾಲೆ . ಜನರಿಗೆ ಮೀನುಗಾರಿಕೆ ಯ ಪ್ರಯೋಜನಗಳು ಸೇರಿದಂತೆ ವಿವಿಧ ಸೇವೆಗಳು ಮಾಹಿತಿಗಳು, ಮೀನುಗಳ ಪರಿಚಯವಾಗಿಸುವ ವಿನೂತನ ಪ್ರಯತ್ನ ಇದಾಗಿದೆ..ಮೊದಲ ಬಾರಿ ಸಮುದ್ರ ಮೀನುಗಳ ಪ್ರದರ್ಶನ ಹೊಸ ಅಯೋಜಿಸಿದ್ದು ಹೊಸ ಮೈಲಿಗಲ್ಲಾಗಿದೆ....
ದಿವಾಕರ ಖಾರ್ವಿ ಮೀನುಗಾರಿಕೆ ಇಲಾಖೆಯ ಅಧಿಕಾರಿ
ಫಲಪುಷ್ಪ ಪ್ರದರ್ಶನ :
ಹುಲಿಯ ಬಾಯಿಯೊಳಗಿನ ಸುರಂಗ ದಾರಿಯಲ್ಲಿ ... ವಸ್ತು ಪ್ರದರ್ಶನದ ಪೆಂಡಾಲ್‌ನೊಳಗೆ ಪ್ರವೇಶಿಸುವ ದ್ವಾರ ಕೊಟ್ಟಿದೆ. ಮೊ ದಲ್ಲೇ ಫಲಪುಷ್ಪ ಪ್ರದರ್ಶನಕ್ಕೆ ವ್ಯವಸ್ಥೆ ಸಹಿತ ಲವ್ ಮಾಡಲಾಗಿದೆ. ಶಾಂತಿಯ ಸಂಕೇತವಾಗಿ ನಿರ್ಮಿಸಿದ ಅ ಹೂವಿನ ಅಲಂಕಾರದ ಪಾರಿವಾಳ, ವೀಣೆ, ದನಕರುಗಳು ಚೆಂಡೆ, ಮದ್ದಳೆ, ಮೃದಂಗ ಕಲಾವಿದರ ನೆನಪನ್ನು ನೀ ಅದ್ಭುತ ಕೈಚಳಕದೊಂದಿಗೆ ತರಕಾರಿಯಲ್ಲಿ ಪುಸ್ತಕಗಳ ತ ಮೂಡಿಬಂದಿರುವ ಉಚ್ಚಿಲ ದಸರಾದ ರೂವಾರಿ ಡಾ| ಜಿ. ಶಂಕರ್, ವಿವಿಧ ಹಿರಿಯ ಲೇಖ ದೇವರು, ಪ್ರಾಣಿ, ಪಕ್ಷಗಳ ಕೆತ್ತನೆಗಳುಭಾರೀ ಗಮನ ಸೆಳೆಯುತ್ತಿವೆ. ಪ್ರಾಣಿಗಳ ಕಲರವ ಹಕ್ಕಿಗಳ ಚಿಲಿಪಿಲಿ , ಮೊಲ ಪಾರಿವಾಳ, ಗಿಳಿ, ಲವ್ ಬರ್ಡ್ ಗಳ ಮಣ್ಣಿನ ಕಲಾಕೃತಿ ಗಳು ಜನರ ಮನಸೂರೆಗೊಳಿಸಿವೆ.
ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಸ್ಥಳೀಯ ನರ್ಸರಿ ವತಿಯಿಂದ ಹಮ್ಮಿ ಕೊಂಡಿರುವ ವಿವಿಧ ಜಾತಿಯ ಹೂವಿನ ಗಿಡಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಭರ್ಜರಿ ಸ್ಪಂದನೆ ವ್ಯಕ್ತವಅದ್ಭುತ ಕಲಾವಿದ ಯತೀಶ್ ಕಿದಿಯೂರು ನಿರ್ಮಿಸಿದ ಬಿಳಿ ನವಿಲಿನ ಪಾರಿವಾಳ ವನ್ನು ಜನರು ಮೊಬೈಲ್ ನಲ್ಲಿ ಕ್ಲಿಕ್ಕಿಸಿ ಸಂಭ್ರಮಿಸಿದರು.
ಕರಕುಶಲ ವಸ್ತುಗಳು, ಹಳೆ ನಾಣ್ಯಗಳ ಪ್ರದರ್ಶನ:
ಬುಟ್ಟಿ ಸೇರಿದಂತೆ ವಿವಿಧ ಮಾದರಿಯ ಬಳ್ಳಿಗಳಿಂದ ನಿರ್ಮಿತ ಕರಕುಶಲ ವಸ್ತುಗಳನ್ನು ಪ್ರದರ್ಶನ ಕ್ಕೆ ಇಡಲಾಗಿದೆ. ಅದರಂತೆಯೇ ಹಳೆ ನಾಣ್ಯಗಳ ಪ್ರದರ್ಶನ ಮಾಡುವ ಮೂಲಕ ನಾಣ್ಯ ಸಂಗ್ರಹಕರು ,ಹಾಗು ಹವ್ಯಾಸಿಗಳಿಗೆ ಇತಿಹಾಸವನ್ನು ಮೆಲುಕುಹಾಕಲು ಸಹಕಾರಿ ಯಾಗಿದೆ.
ವಸ್ತು ಪ್ರದರ್ಶನ ನಮಗೆ ನಮ್ಮ ಇತಿಹಾಸವನ್ನು ತಿಳಿಸುತ್ತವೆ. ನಮ್ಮ ಹಿರಿಯರ ಜೀವನ, ಪರಂಪರೆ, ಅವರು ಬಳಸುತ್ತಿದ್ದ ವಸ್ತು, ಕಲಾಕೃತಿ ಹೀಗೆ ಎಲ್ಲವೂ ನಮ್ಮನ್ನು ಸೆಳೆಯುವ ಜತೆಗೆ ಹೊಸದೊಂದು ಲೋಕಕ್ಕೆ ಕೊಂಡೊಯ್ಯುತ್ತದೆ ಯತೀಶ್ ಕಿದಿಯೂರು ವಸ್ತು ಪ್ರದರ್ಶನ ಮೇಲ್ವಿಚಾರಕರು ಹಾಗೂ ಕಲಾವಿದ.
ಉಚ್ಚಿಲ ದಸರ ರೂವಾರಿ ಜಿ ಶಂಕರ್ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಉಚ್ಚಿಲದಲ್ಲಿ ಶಾಶ್ವತ ವಾಗಿ ಸ್ಥಾಪಿಸಲುದ್ದೇಶಿಸಿರುವಮ್ಯೂಸಿಯಂ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನಕ್ಕೆ ಮೀನುಗಾರರುಒದಗಿಸಿರುವ ಹಳೆಯ ಕಾಲದ ಬೃಹತ್, ಸಣ್ಣ ದೋಣಿ, ಬಲೆಗಳು, ಮೀನುಗಾರಿಕಾ ಪರಿಕರಗಳು ಯುವ ಸಮುದಾಯವನ್ನು ಹೆಚ್ಚು ಆಕರ್ಷಿಸುತ್ತಿದೆ. ಇಲ್ಲಿರುವ ನೂರಕ್ಕೂ ಅಧಿಕ ಸಾಂಪ್ರದಾಯಿಕ ಮೀನುಗಾರಿಕಾ ಪರಿಕರಗಳು ಅಧ್ಯಯನ ಯೋಗ್ಯವಾಗಿವೆ
ಶೋಭಯಾತ್ರೆ:
ಅ. 24 ರಂದು ಶೋಭಾಯಾತ್ರೆಯು ಉಚ್ಚಿಲ ದೇವಳದಿಂದ ಹೊರಟು ಎರ್ಮಾಳು ಶ್ರೀ ಜನಾರ್ದನ ದೇವಳದವರೆಗೆ ಸಾಗಿ ಅಲ್ಲಿನ ಡಿವೈಡರ್ ಮೂಲಕ ತಿರುಗಿ ಉಚ್ಚಿಲ ಮೂಳೂರು, ಕಾಪು, ಕೊಪ್ಪಲಂಗಡಿ ವರೆಗೆ ಸಾಗಿ ಅಲ್ಲಿಂದ ಬೀಚ್ ರಸ್ತೆ ಮೂಲಕ ಕಾಪು ದೀಪಸ್ತಂಭ ತಲುಪಲಿದೆ ಎಂದರು.
ವೈಭವದ ಶೋಭಯಾತ್ರೆಗೆ ಸಿದ್ಧತೆ:
ಅ.24 ರ ಸಂಜೆ 4.30ಕ್ಕೆ ಶ್ರೀ ಕ್ಷೇತ್ರದ ಮುಂಭಾಗ ವೈಭವದ ಶೋಭಾ ಯಾತ್ರೆಗೆ ಚಾಲನೆ ನೀಡಲಾಗುವುದು. 10 ವಿಗ್ರಹಗಳ ಟ್ಯಾಬ್ಲೋ ಮತ್ತು 40 ವಿವಿಧ ರೀತಿಯ ಇತರ ಟ್ಯಾಬ್ಲೋಗಳೊಂದಿಗೆ ಭಜನಾ ಸಂಕೀರ್ತನೆ, ಹುಲಿವೇಷ, ವಿವಿಧ ವೇಷಭೂಷಣ, ಚಂಡೆ ವಾದ್ಯ, ಗೊಂಬೆ ಕುಣಿತಗಳೊಂದಿಗೆ ನಡಿಗೆ ಮೂಲಕ ಶೋಭಾ ಯಾತ್ರೆ ಮುಂದುವರೆಯಲಿದೆ. ಸಂಜೆ 6 ಗಂಟೆಗೆ ಎರ್ಮಾಳು ತಲುಪಲಿದ್ದು, ಅಲ್ಲಿಂದ ಮುಂದುವರೆದು ರಾತ್ರಿ 10 ಗಂಟೆಗೆ ಕಾಪು ದೀಪಸ್ತಂಭ ತಲುಪಿ 10.30 ಗಂಟೆಯಿಂದ ಜಲಸ್ತಂಭನ ಆರಂಭಗೊಳ್ಳಲಿದ್ದು, 11 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕಾಪು ಬೀಚ್ ಬಳಿ ಗಂಗಾರತಿ ಹಾಗೂ 10ಸಾವಿರ ಮಹಿಳೆಯರಿಂದ ಸಾಮೂಹಿಕ ಮಂಗಳಾರತಿ ನಡೆಯಲಿದೆ. ಈ ಸಂದರ್ಭ ಸಮುದ್ರ ಮಧ್ಯದಲ್ಲಿ 50ಕ್ಕೂ ಅಧಿಕ ಮೀನುಗಾರಿಕಾ ಪರ್ಸೀನ್ ಮತ್ತು ಟ್ರಾಲ್ ಬೋಟುಗಳ ಪ್ರಖರ ಬೆಳಕು ಝಗಮಗಿಸಲಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.