logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ: ಅಪಾರ್ಟ್ ಮೆಂಟ್ ಮಹಡಿಯಿಂದ ಕೆಳಗೆ ಬಿದ್ದು 13 ವರ್ಷದ ಬಾಲಕ‌ ಮೃತ್ಯು

ಟ್ರೆಂಡಿಂಗ್
share whatsappshare facebookshare telegram
23 Sept 2022
post image

ಉಡುಪಿ :ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನದ ಬಳಿಯ ಫ್ಲ್ಯಾಟ್ ನ ಅಪಾರ್ಟ್ ಮೆಂಟ್ ನಲ್ಲಿದ್ದ ಜೇನು ತೆಗೆಯುವುದನ್ನು ನೋಡುತ್ತಿದ್ದ ಬಾಲಕನೋರ್ವ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಸೆ.22ರಂದು ನಡೆದಿದೆ. ಮೃತ ಬಾಲಕನನ್ನು ಆಂಧ್ರಪ್ರದೇಶ ಮೂಲದ ಪ್ರಸ್ತುತ ಉದ್ಯಾವರದಲ್ಲಿ ನೆಲೆಸಿರುವ ರೀನಾ ಮಂಡೆಲ್ ಎಂಬವರ ಮಗ 13ವರ್ಷ ಪ್ರಾಯದ ಆಶಿಕ್ ಎಂದು ಗುರುತಿಸಲಾಗಿದೆ. ಬಾಲಕನ ತಾಯಿ ರೀನಾ ಮಂಡೆಲ್ ಅವರು ಜೇನು ತೆಗಿಯುವ ಕೆಲಸ ಮಾಡಿಕೊಂಡಿದ್ದು, 3 ದಿನದ ಹಿಂದೆ ಉಡುಪಿಗೆ ಬಂದು ತಮ್ಮ ಸಂಬಂಧಿಕರೊಂದಿಗೆ ಉದ್ಯಾವರ ಚರ್ಚ್ ಹಿಂದುಗಡೆ ಟೆಂಟ್ ಹಾಕಿಕೊಂಡು ವಾಸ ಮಾಡಿಕೊಂಡಿದ್ದರು. ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನದ ಎದುರು ಇರುವ ಪ್ಲಾಟ್ ವೊಂದರ ಅಪಾರ್ಟ್ ಮೆಂಟ್ ನ ಮಹಡಿಯಲ್ಲಿ ಇದ್ದ ಜೇನನ್ನು ಕಂಡು ಅದನ್ನು ತೆಗೆಯಲು ಫ್ಲಾಟ್ ನ ಮಾಲೀಕರ ಬಳಿ ಅನುಮತಿ ಕೇಳಿ ಜೇನು ತೆಗೆಯಲು ನಿನ್ನೆ ರೀನಾ ಮಂಡೆಲ್ ಅವರ ಮಗಳ ಗಂಡ ಆಕಾಶ ಹಾಗೂ ಅವರ ಅಕ್ಕನ ಮಗಳ ಗಂಡ ರೋಶನ್ ಜೊತೆಗೆ ಆಶಿಕ್ ಅಪಾರ್ಟ್ ಮೆಂಟ್ ಗೆ ತೆರಳಿದ್ದರು. ಈ ವೇಳೆ ಮಹಡಿ ಮೇಲಿಂದ ಜೇನು ತೆಗೆಯುತ್ತಿರುವುದನ್ನು ನೋಡುತ್ತಿದ್ದ ಆಶಿಕ್ ಆಯತಪ್ಪಿ ಆಕಸ್ಮಿಕವಾಗಿ ಮಹಡಿಯಿಂದ ಕೆಳಗೆ ಇದ್ದು ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.