



ಉಡುಪಿ: ಉಡುಪಿಯ ಪೊಲೀಸ್ ವಸತಿ ಗೃಹದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಕುಕ್ಕಿಕಟ್ಟೆಯ ಪೌಲ್ ಸಾಲಿನ್ಸ್ ಎಂಬವರು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಉಡುಪಿ ಮಹಿಳಾ ಠಾಣೆ, ನಗರಠಾಣೆ ಹಾಗೂ ವಸತಿ ಗೃಹ ಪರಿಸರದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಆದರೆ ಹಾವನ್ನು ಹಿಡಿಯಲು ಬಂದಾಗ ಪೊದೆಯಲ್ಲಿ ಅವಿತು ತಪ್ಪಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ಪೊಲೀಸ್ ವಸತಿ ಗೃಹದ ಪಕ್ಕದಲ್ಲಿ ಪೊದೆಯಲ್ಲಿ ಅವಿತಿದ್ದ ಹೆಬ್ಬಾವನ್ನು ಕುಕ್ಕಿಕಟ್ಟೆಯ ಪೌಲ್ ಸಾಲಿನ್ಸ್ ಅವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.