logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ: ಕಿದಿಯೂರಿನ ಯುವತಿ ನಾಪತ್ತೆ

ಟ್ರೆಂಡಿಂಗ್
share whatsappshare facebookshare telegram
23 Feb 2022
post image

ಉಡುಪಿ: ಕ್ಯಾಂಟೀನ್ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವತಿಯೊಬ್ಬಳು ಮನೆಗೆ ವಾಪಸು ಬಾರದೆ ನಾಪತ್ತೆಯಾಗಿರುವ ಘಟನೆ ಅಂಬಲಪಾಡಿ ಕಿದಿಯೂರು ಎಂಬಲ್ಲಿ ನಡೆದಿದೆ. ಅಂಬಲಪಾಡಿ ಕಿದಿಯೂರು ನಿವಾಸಿ ಧರ್ಮಪಾಲ ವರ್ಮ ಅವರ ಮಗಳು 23 ವರ್ಷದ ಏಕತಾ ವರ್ಮಾ ನಾಪತ್ತೆಯಾದ ಯುವತಿ. ಈಕೆ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿಯೇ ಇದ್ದಳು. ಫೆ. 21ರಂದು ಮಧ್ಯಾಹ್ನ 1.30 ಗಂಟೆಗೆ ಮಣಿಪಾಲದಲ್ಲಿರುವ ಅಣ್ಣನ ಕ್ಯಾಂಟೀನ್ ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ಆ ಬಳಿಕ ಮಣಿಪಾಲ ಕ್ಯಾಂಟೀನ್ ಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿದ್ದಾಳೆ. ಇಂದ್ರಾಳಿ, ಉಡುಪಿ ಮಣಿಪಾಲ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ತಂದೆ ಧರ್ಮಪಾಲ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

WhatsApp Image 2026-06-24 at 10.46.16 PM.jpeg
WhatsApp Image 2026-06-24 at 10.51.40 PM.jpeg
IMG_5455.jpg.jpeg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.