



ಉಡುಪಿ:ಆರೂರು ಗ್ರಾಮ ಪಂಚಾಯತ್‌ನ ಪ್ರಸಕ್ತ ಸಾಲಿನ ಪ್ರಥಮ ಗ್ರಾಮಸಭೆಯು ಸೋಮವಾರ ವಿ.ಕೆ.ಆರ್ ಆಚಾರ್ಯ ಪ್ರೌಢಶಾಲಾ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಎ ಗುರುರಾಜ್ ರಾವ್ ಅಧ್ಯಕ್ಷತೆ ನಡೆಯಿತು. ತಾಲೂಕು ಯೋಜನಾ ಅಧಿಕಾರಿ ಸಂದೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯುತ್ ಸಮಸ್ಯೆ, ಉಪ್ಪು ನೀರಿನ ಸಮಸ್ಯೆ ಹಾಗೂ ಚಿರತೆ ಮತ್ತು ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಅರಣ್ಯ, ಕೃಷಿ, ಅರೋಗ್ಯ, ಪಶು ಸಂಗೋಪನೆ ಅರಣ್ಯ, ಪೋಲಿಸ್ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಉಪಾಧ್ಯಕ್ಷೆ ವನಿತಾ, ಪಂಚಾಯತ್ ಕಾರ್ಯದರ್ಶಿ ಆನಂದ್ ನಾಯ್ಕ್, ಆಶಾ -ಅಂಗನವಾಡಿ ಕಾರ್ಯಕರ್ತರು, ಶಾಲಾ ಸಿಬ್ಬಂದಿಗಳು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಿ.ಡಿ.ಓ ಪ್ರಮಿತ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.