



ಉಡುಪಿ:
ಅಲೆವೂರು ಮಂಚಿ ಪ್ರದೇಶದಲ್ಲಿ ಉಗ್ರವರ್ತನೆಯಿಂದ ಆತಂಕದ ವಾತಾವರಣ ಸೃಷ್ಟಿಸಿದ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, 112 ತುರ್ತು ಸಹಾಯ ಕೇಂದ್ರದ ಪೋಲಿಸರ ಸಹಕಾರದಿಂದ ವಶಕ್ಕೆ ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಇಂದು ನಡೆದಿದೆ. ಯುವಕನ ವರ್ತನೆಯಿಂದ ಸಾರ್ವಜನಿಕರು ಭೀತಿಗೊಳಗಾಗಿದ್ದರು. ಯುವಕನು ಒರಿಸ್ಸಾ ಮೂಲದವನೆಂದು ತಿಳಿದುಬಂದಿದೆ. ಮನೋವ್ಯಾಧಿ ಅಥವಾ ಮಾದಕ ದ್ರವ್ಯ ಸೇವನೆಯಿಂದ ಯುವಕ ಉಗ್ರವರ್ತನೆ ತೋರಿರಬಹುದೆಂದು ಶಂಕಿಸಲಾಗಿದೆ. . ಸಂಬಂದಪಟ್ಟವರು ಇದ್ದಲ್ಲಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.