logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ ಸಹಾಯಕ ಇಂಜಿನಿಯರ್‌ ಹರೀಶ್‌ ಮನೆಯಲ್ಲಿ ಪತ್ತೆಯಾಯಿತು ಕೆಜಿಗಟ್ಟಲೆ ಬಂಗಾರ

ಟ್ರೆಂಡಿಂಗ್
share whatsappshare facebookshare telegram
17 Jun 2022
post image

ಉಡುಪಿ: ಉಡುಪಿ ಸಹಾಯಕ ಇಂಜಿನಿಯರ್‌ ಹರೀಶ್‌ ಮನೆಯಲ್ಲಿ ಕಂತೆ ಕಂತೆ ಹಣ ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ಹರೀಶ್‌ ಸಣ್ಣ ನೀರಾವರಿ ಇಲಾಖೆಯ ಸಹಾಯ ಇಂಜಿನಿಯರ್‌ ಅಗಿದ್ದಾರೆ. ಉಡುಪಿಯಲ್ಲಿ ಕೊರಂಗ್ರಪಾಡಿಯ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ, 5 ಲಕ್ಷ ರೂಪಾಯಿ ನಗದು ಚಿನ್ನದ ತಟ್ಟೆ, ಅಪಾರ ಚಿನ್ನದ ಆಭರಣಗಳನ್ನು ಪತ್ತೆ ಹಚ್ಚಿದ್ದಾರೆ.

15ಕ್ಕೂ ಹೆಚ್ಚು ಚಿನ್ನದ ಬಳೆಗಳು, 30ಕ್ಕೂ ಹೆಚ್ಚು ಚಿನ್ನದ ಸರ, ನೆಕ್ಲೆಸ್‌ ಬ್ರಾಸ್ಲೈಟ್‌, ಚಿನ್ನದ ಒಡವೆ, ಉಂಗುರ,ದೇವರ ಮೂರ್ತಿಗಳು ಪತ್ತೆಯಾಗಿದೆ. ಆಸ್ತಿ ಪತ್ರ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಸಿಬಿ ಡಿವೈಎಸ್ಪಿ ಮಂಜುನಾಥ ಕವರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿಯ ವೇಳೆ ಇನ್ಸ್‌ ಪೆಕ್ಟರ್‌ ಗಳಾದ ಸತೀಶ್.ಜಿ.ಜೆ, ರಫಿಕ್ ಎಂ, ಸಿಬಂದಿಗಳಾದ ಯತಿನ್ ಕುಮಾರ್, ಪ್ರಸನ್ನ ದೇವಾಡಿಗ, ರವೀಂದ್ರ ಗಾಣಿಗ, ಅದ್ಬುಲ್ ಜಲಾಲ್, ಅಬ್ದುಲ್ ಲತೀಫ್, ರಾಘವೇಂದ್ರ ಹೊಸಕೋಟೆ, ಸೂರಜ್ ಕಾಪು,ರಮೇಶ್ ಭಂಡಾರಿ, ಹಾಗೂ ಪ್ರತಿಮಾ ದಾಳಿಯಲ್ಲಿ ಭಾಗವಹಿಸದ್ದರು.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.