logo
WhatsApp Image 2026-04-02 at 14.46.04.jpeg
hindalco everlast.jpeg

ಉಡುಪಿ: ವಶಪಡಿಸಿಕೊಂಡ ವಾಹನಗಳ ಹರಾಜು

ಟ್ರೆಂಡಿಂಗ್
share whatsappshare facebookshare telegram
4 Jun 2023
post image

ಉಡುಪಿ: ಉಡುಪಿ ಸಾರಿಗೆ ಇಲಾಖೆಯ ವಾಹನ ನಿರೀಕ್ಷಕರು ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳ ಮಾಲೀಕರು ಇಂದಿನವರೆಗೆ, ವಾಹನಗಳನ್ನು ಬಿಡಿಸಿಕೊಳ್ಳಲು ಮುಂದೆ ಬಾರದ ಕಾರಣ, ಈ ವಾಹನಗಳನ್ನು ಅವುಗಳು ಹೇಗಿವೆಯೋ ಹಾಗೆಯೇ ಜುಲೈ 19 ರಂದು ಬೆ.11 ಗಂಟೆಗೆ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹರಾಜು ಹಾಕಲಾಗುವುದು.

ವಾಹನಗಳ ಮಾಲೀಕರು 10 ದಿನಗಳ ಒಳಗೆ ವಾಹನಗಳ ದಾಖಲಾತಿಗಳನ್ನು ನೀಡಿ ದಂಡ ಪಾವತಿಸಿ ವಾಹನಗಳನ್ನು ಹರಾಜು ಪ್ರಕ್ರಿಯೆಯಿಂದ ಬಿಡಿಸಿಕೊಳ್ಳಬಹುದು ಇಲ್ಲವಾದಲ್ಲಿ ಹರಾಜು ದಿನದಂದು ಖುದ್ದಾಗಿ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.