



ಉಡುಪಿ: ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸಂಬಂದಿಸಿದ ನಂಟನ್ನು ಹೊಂದಿ ಕೊಂಡು 5 ಗ್ರಾಮಗಳಾದ ಬೈಲೂರು, ಮಾರ್ಪಳ್ಳಿ, ಚಿಟ್ಪಾಡಿ, ಕೊರಂಗಪಡಿ, ಕೆಮೊತ್ತುರು ಮಾಗಣೆಗೆ ಒಳಪಟ್ಟ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಶಿಲಾಮಯ ಆಲಯದಲ್ಲಿ ಪ್ರತಿಷ್ಠಾಪನಾ ಅಂಗವಾಗಿ ಶ್ರೀ ಬೈಲೂರು ದೇವಳದಲ್ಲಿ ಪ್ರಾಥನೆ ಗೈದು ಅಲ್ಲಿಂದ ಹೊರಟು ಮುಖ್ಯ ರಸ್ತಯಲ್ಲಿ ಸಾಗಿ ಬಂದು ಮಿಷನ್ ಕಾಂಪೌಂಡ್, ಅಮ್ಮಣಿ ಹಾಲ್, ಚಿಟ್ಪಾಡಿ ಸರ್ಕಲ್, ಹನುಮಾನ್ ಗ್ಯಾರೇಜ್ ಸಮೀಪದ ದೈವಸ್ಥಾನಕ್ಕೆ ಬಂದು ತಲುಪಿತು.
ವಿವಿಧ ವೇಷ ಭೂಷಣ, ತಟ್ಟೀರಾಯ, ಗೊಂಬೆಗಳು, ವಾದ್ಯ, ಚಂಡೆ, ಕೀಲುಕುದುರೆ, ಭಜನಾ ತಂಡ, ಮಹಿಳೆಯರ ಪೂರ್ಣ ಕುಂಭ ಸ್ವಾಗತ, ಯಕ್ಷಗಾನ ವೇಷ, ಶ್ರೀದೇವಿ, ದೈವಗಳ ನೂತನ ರಜತ ಕವಚದ ಮೂರ್ತಿ, ದೈವದ ಭಂಡಾರ ಸಾಮಗ್ರಿಗಳು, ವಿಶೇಷ ಟ್ಯಾಬೋಗಲ್ಲಿ ಮೆರವಣಿಗೆಯಲ್ಲಿ ತರಲಾಯಿತು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಟ್ಟಾರ್ ರಾತಂಕರ ಹೆಗ್ದೆ, ಬೈಲೂರು ದೇವಳದ ಮೊಕ್ತೇಶ್ವರ ಮೋಹನ್ ಮುದ್ದಣ ಶೆಟ್ಟಿ, ತಂತ್ರಿಗಳಾದ ಶ್ರೀ ರಮಣ ತಂತ್ರಿ, ಕೃಷ್ಣಮೂರ್ತಿ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್, ರಮೇಶ ಶೆಟ್ಟಿ, ನವೀನ ಭಂಡಾರಿ, ಕಿರಣ ಕುಮಾರ್ ಬೈಲೂರು, ಅರುಣ ಶೆಟ್ಟಿಗಾರ್, ಸುರ್ದಶನ ಶೇರಿಗಾರ್, ಜಯಕರ ಶೆಟ್ಟಿ ಇಂದ್ರಾಳಿ, ಕೃಷ್ಣ ರಾಜ್ ಕೊಂಡಚ, ಶ್ರೀನಿವಾಸ ಆಚಾರ್ಯ, ಗೋಪಾಲ್ ಕೃಷ್ಣ ಬಲ್ಲಾಳ, ಸದಾನಂದ ಶೆಟ್ಟಿ, ದುರ್ಗಾ ದಾಸ್, ವಿವಿಧ ಸಮಿತಿಗಳ ಪದಾಧಿಕಾರಿಗಳು, ಮಹಿಳೆಯರು, ಊರಿನ ಪರಊರಿನ ಸಾವಿರಾರು ಭಕ್ತರೂ ಪಾಲ್ಗೊಂಡರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.