



ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಲು ಸಾಧ್ಯವಾಗದ 85 ವರ್ಷ ಮೇಲ್ಪಟ್ಟ 4664 ಹಾಗೂ 1436 ವಿಶೇಷಚೇತನರು ಸೇರಿದಂತೆ ಒಟ್ಟು 6100 ಮತದಾರರಿದ್ದು, ಅವರುಗಳಲ್ಲಿ 85 ವರ್ಷ ಮೇಲ್ಪಟ್ಟ 4512 ಮಂದಿ ಹಾಗೂ 1407 ವಿಶೇಷಚೇತನರು ಸೇರಿದಂತೆ ಒಟ್ಟು 5919 ಮಂದಿ ಮತದಾರರು ಮನೆಯಿಂದಲೇ ಮತ ಚಲಾಯಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 1057 ವಯಸ್ಕ ಮತದಾರರಲ್ಲಿ 1031 ಮಂದಿ ಹಾಗೂ 216 ಪಿಡಬ್ಲ್ಯೂಡಿ ಮತದಾರರಲ್ಲಿ 211 ಮತದಾರರು, ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 764 ಹಿರಿಯ ನಾಗರಿಕ ಮತದಾರರ ಪೈಕಿ 742 ಮಂದಿ ಹಾಗೂ 197 ಪಿಡಬ್ಲ್ಯೂಡಿ ಮತದಾರರಲ್ಲಿ 196 ಮತದಾರರು, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 851 ವಯಸ್ಕ ಮತದಾರರಿದ್ದು, ಅವರುಗಳಲ್ಲಿ 823 ಮಂದಿ ಹಾಗೂ 250 ಪಿಡಬ್ಲ್ಯೂಡಿ ಮತದಾರರಲ್ಲಿ 248 ಮತದಾರರು, ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 854 ವಯಸ್ಕ ಮತದಾರರಲ್ಲಿ 830 ಮಂದಿ ಹಾಗೂ 285 ಪಿಡಬ್ಲ್ಯೂಡಿ ಮತದಾರರಲ್ಲಿ 282 ಮತದಾರರು ಮನೆಯಿಂದಲೇ ಮತದಾನ ಮಾಡುವ ಹಕ್ಕಿನ ಸದುಪಯೋಗ ಪಡೆದುಕೊಂಡಿದ್ದಾರೆ.
ಇದೇ ರೀತಿಯಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 91 ವಯಸ್ಕ ಮತದಾರರಲ್ಲಿ 90 ಮಂದಿ ಹಾಗೂ 28 ಪಿಡಬ್ಲ್ಯೂಡಿ ಮತದಾರರಲ್ಲಿ 27 ಮಂದಿ ಮತದಾರರು, ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 237 ವಯಸ್ಕ ಮತದಾರರಲ್ಲಿ 226 ಮಂದಿ ಹಾಗೂ 95 ಪಿಡಬ್ಲ್ಯೂಡಿ ಮತದಾರರಲ್ಲಿ 93 ಮತದಾರರು, ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 501 ವಯಸ್ಕ ಮತದಾರರಲ್ಲಿ 479 ಮಂದಿ ಹಾಗೂ 242 ಪಿಡಬ್ಲ್ಯೂಡಿ ಮತದಾರರಲ್ಲಿ 232 ಮಂದಿ ಮತದಾರರು ಮತ್ತು ತರೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 309 ವಯಸ್ಕ ಮತದಾರರಲ್ಲಿ 291 ಮಂದಿ ಹಾಗೂ 123 ಪಿಡಬ್ಲ್ಯೂಡಿ ಮತದಾರರಲ್ಲಿ 118 ಮಂದಿ ಮತದಾರರು ಮನೆಯಲ್ಲಿಯೇ ಮತ ಚಲಾಯಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.