



ಉಡುಪಿ:
ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶಿಥಲೀಕೃತ ಶವ ರಕ್ಷಣಾ ಘಟಕದಲ್ಲಿ ಕಳೆದ ಎರಡು ತಿಂಗಳಿಂದ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ಶವಗಳ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಮಲ್ಪೆ ಪೋಲಿಸ್ ಠಾಣೆ, ನಗರ ಪೋಲಿಸ್ ಠಾಣೆಯವರು ಬೀಡಿನಗುಡ್ಡೆಯ ದಫನಭೂಮಿಯಲ್ಲಿ ನಡೆಸಿದರು. ಮಾಧ್ಯಮ ಪ್ರಕಟಣೆ ನೀಡಿಯೂ ಮೃತರ ವಾರಸುದಾರರು ಬಾರದೆ ಇರುವುದರಿಂದ ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಶವಗಳನ್ನು ಗೌರಯುತವಾಗಿ ಅಂತ್ಯಸಂಸ್ಕಾರ ನಡೆಸಲಾಯಿತು. ಈ ಸಂದರ್ಭ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಮಲ್ಪೆ ಪೋಲಿಸ್ ಠಾಣೆಯ ಎ.ಎಸ್.ಐ ತನಿಯ, ಹೆಡ್ ಕಾನ್ಸ್ಟೇಬಲಗಳಾದ ಶಶಿಧರ್, ಶಿವ ನಾಯ್ಕ್, ನಗರ ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹರೀಶ್ ನಾಯ್ಕ್, ಹಾಗೂ ಜೋಸ್ ಆಲೂಕಾಶ್ ಸಿಬ್ಬಂದಿ ರಾಜೇಶ್ ಶೆಟ್ಟಿ, ಜಿತೇಶ್ ಪ್ರಶಾಂತ್, ವಿನೇಶ್, ಪ್ರದೀಪ್ ಅಜ್ಜರಕಾಡು ಭಾಗಿಯಾಗಿದ್ದರು. ಜಿಲ್ಲಾಸ್ಪತ್ರೆ, ನಗರಸಭೆ, ಪ್ಲವರ್ ವಿಷ್ಣು, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಯತೀಶ್, ಸಾಜೀ ಕುಮಾರ್ ಅಜ್ಜರಕಾಡು ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.