



ಸುರಕ್ಷಾ ಕೆರ್ವಾಶೆ ಜರ್ನಲಿಸಂ ವಿಭಾಗ ಎಂ. ಪಿ. ಎಂ ಕಾಲೇಜು ಕಾರ್ಕಳ :
ಕೇರ್ವಾಶೆ ಯಲ್ಲಿ ತಯಾರಾಗುವ ಕೃಷ್ಣನ ಕಡೆಗೋಲಿಗೆ ತುಂಬಾ ಬೇಡಿಕೆಯು ಇದೆ. ಪ್ಲಾಸ್ಟಿಕ್ ಪರಿಕರಗಳನ್ನು ಬಳಕೆಯು ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಪ್ಲಾಸ್ಟಿಕ್ ಪರಿಕರಗಳು ಮಾನವನ ಜೀವಕ್ಕೆ ಹಾನಿ ಉಂಟು ಮಾಡುತ್ತಿದೆ. ಇಂತಹ ಈ ಸಂದರ್ಭದಲ್ಲಿ ಉಡುಪಿಯ ಅಷ್ಟಮಠಗಳ ರಥಬೀದಿಯ ಮಳಿಗೆಗಳಲ್ಲಿ ಮಾರಾಟವಾಗುವ ಈ ಕೃಷ್ಣನ ಕಡೆ ಗೋಲು ತುಂಬಾ ಆಕರ್ಷಕವಾಗಿ ಗ್ರಾಹಕರನ್ನು ಸೆಳೆಯುತ್ತಿದೆ. ಕೆರ್ವಾಶೆಯಲ್ಲಿ ತಯಾರಾಗುವ ಈ ಕಡೆ ಗೋಲಿಗೆ ಹೆಚ್ಚಿನ ಪ್ರಶಸ್ತ್ಯ ವು ದೊರಕಿದೆ. ಹಾಗೆಯೇ ಬೇಡಿಕೆಯು ಹೆಚ್ಚಾಗಿದೆ.
ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಶುಂಠಿಕುಮೇರುನಲ್ಲಿರುವ ಕುಟುಂಬವು ಈ ಗುಡಿ ಕೈಗಾರಿಕೆಯಲ್ಲಿ ನಂಬಿಕೊಂಡು ಜೀವನವನ್ನು ನಡೆಸುತ್ತಿದೆ. ಸದಾನಂದ ಗುಡಿಗರ್ ರವರು ಕಡೆಗೋಲು ತಯಾರಿಕೆಯಲ್ಲಿ ಎತ್ತಿದ ಕೈ. ಇವರು ದಿನಕ್ಕೆ ಕಡೆಗೋಲನ್ನು ತಯಾರಿಸುತ್ತಾರೆ ಅದರ ಜೊತೆಗೆ ಬೇರೆ ಬೇರೆ ಪರಿಕರಗಳನ್ನು ತಯಾರಿಸುತ್ತಾರೆ.
ಸದಾನಂದ ಗುಡಿಗಾರ್ ರವರ ಜೊತೆಗೆ ಅವರ ಸಹೋದರರಾದ ಜನಾರ್ಧನ್ ಗುಡಿಗಾರ್ ಹಾಗೂ ನಾರಾಯಣ ಗುಡಿಗಾರ್ ತಮ್ಮ ವೃತ್ತಿ ಜೀವನವನ್ನು ಸಾಗಿಸುತ್ತಿದ್ದಾರೆ.
ಸದಾನಂದ ಗುಡಿಗಾರ್ ರವರು 15 ವರ್ಷದವರಿದ್ದಾಗಲೇ ಈ ವೃತ್ತಿಯನ್ನು ಪ್ರಾರಂಭಿಸಿದರು. ಹಾಗೆ ಪ್ರಾರಂಭವಾದ ಇವರ ಈ ವೃತ್ತಿ ಜೀವನ ಈಗಲು ಸಾಗುತಲಿದೆ. ಇದರ ಜೊತೆಗೆ ಅವರ ಮಕ್ಕಳಾದ ಪ್ರಶಾಂತ್ ಹಾಗೂ ಪ್ರಮೋದ್ ಅವರಿಗೂಈ ಗುಡಿ ಕೈಗಾರಿಕೆಯನ್ನು ಕಲಿಸುತ್ತಿದ್ದಾರೆ.
ಉಡುಪಿ ಕೃಷ್ಣನ ಮಠಕ್ಕೆ ಆಗಮಿಸುವ ಭಕ್ತರು ಭಕ್ತಿಯ ಪ್ರತೀಕವಾಗಿ ಕಡೆಗೋಲನ್ನು ಕಡೆಗೂಲಿನ ಮಳಿಗೆಗಳಲ್ಲಿ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗುವುದು ವಡಿಕೆಯಾಗಿದೆ.
ಸದಾನಂದ ಗುಡಿಗಾರ್ ರವರು ವಾಡಿಕೆಯ ಕಡೆಗೋಲಿನ ತಯಾರಿಕೆಗೆ ಕಾಟುಮರಗಳಾದ ಕುಂಟಲ, ನಾನಿಲ್, ಉಪ್ಪಳಿಕೆ ಎಂತಹ ಭಾರವಾದ ಮರಗಳನ್ನು ಹಾಗೆಯೆ ಸ್ವಲ್ಪ ಬಾಗಿದ ಮರಗಳನ್ನು ಕಡೆಗೂಲು ತಯಾರಿಕೆಗೆ ತೆಗೆದುಕೊಳ್ಳುತ್ತಾರೆ. ಮರಗಳನ್ನು ಆಯ್ದುಕೊಂಡು ಅದರಿಂದ ಕಡೆಗೋಲನ್ನು ತಯಾರಿಸುತ್ತಾರೆ.ಈ ಕಡೆಗೋಲಿಗೆ ವಾಡಿಕೆಯ ಅಡೆಗೋಲಿನ ಬೆಲೆಗಿಂತ ಹೆಚ್ಚಾಗಿರುತ್ತದೆ. ಹಾಗೆಯೇ ಈ ಕಡೆ ಗೋಲು ದೀರ್ಘಕಾಲ ಬಾಳಿಕೆ ಬರುತ್ತದೆ. ಇದರ ಜೊತೆ ವಿವಿಧ ರಾಗಿಮುದ್ದೆ ತಯಾರಿಕೆ ಕೋಲು, ಗುಲ್ಡನ್ , ವಿವಿಧ ಗಾತ್ರಕ್ಕೆ ತಕ್ಕಂತೆ 1 ಅಡಿಯಿಂದ 10 ಅಡಿಯವರೆಗಿನ ಬೃಹತ್ ಗಾತ್ರದ ಕೃಷ್ಣನ ಕಡೆಗೋಲು, ಕೋಲಾಟದ ಕೋಲು, ಒನಕೆ, ಬಲಾಯಿ, ಲಟ್ಟಣಿಗೆ ಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ವಿಧದ ಪರಿಕರಗಳನ್ನು ತಯಾರಿಸುತ್ತಾರೆ.
ನಾರಾಯಣ ಗುಡಿಗಾರ್ ಜನಾರ್ಧನ ಗುಡಿಗಾರ ಅವರು ದಾರಂದ ಕೆತ್ತನೆಯಲ್ಲಿ ಪರಿಣಿತರು. ಬಾಗಿಲುಗಳಲ್ಲಿ ವಿನ್ಯಾಸವುಳ್ಳ ಕೆತ್ತನೆಗಳು ಹಾಗೆಯೇ ದೇವಸ್ಥಾನ ಐಷಾರಾಮಿ ಮನೆಗಳ ಬಾಗಿಲುಗಳನ್ನು ತಯಾರಿಸುವಲ್ಲಿ ಇವರಿಗೆ ಹೆಚ್ಚಿನ ಬೇಡಿಕೆ ಇದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.