logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ: ಜನಸ್ಪಂದನ ಸಭೆಯಲ್ಲಿ ಬಂದ ಜನಸಾಮಾನ್ಯರ ಅಹವಾಲುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಿ - ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಟ್ರೆಂಡಿಂಗ್
share whatsappshare facebookshare telegram
27 Jun 2024
post image

ಉಡುಪಿ: ಜನಸ್ಪಂದನ ಸಭೆಯಲ್ಲಿ ಬಂದAತಹ ಅಹವಾಲುಗಳನ್ನು ಇಲಾಖಾ ಅಧಿಕಾರಿಗಳು ಕಾನೂನು ಪ್ರಕಾರ ವಿಲೇವಾರಿ ಮಾಡಬೇಕು ಒಂದೊಮ್ಮೆ ಅದು ಸರ್ಕಾರ ಹಂತದಲ್ಲಿ ಬಗೆ ಹರಿಸುವಂತಿದ್ದಲ್ಲಿ ಇದ್ದಲ್ಲಿ ಅದನ್ನು ಸರ್ಕಾರದ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸುವುದರೊಂದಿಗೆ ಅವುಗಳನ್ನು ಫಾಲೋ ಅಪ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.

ಅವರು ಜೂ.೨೬ ರಂದು ಹೆಬ್ರಿಯ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಮೊದಲನೆದಾಗಿ ಹೆಬ್ರಿಯ ಪ್ರಗತಿಪರ ನಾಗರೀಕ ಸೇವಾ ಸಮಿತಿ ಹೆಬ್ರಿ ಪೊಲೀಸ್ ಠಾಣೆ ಸ್ಥಳಾಂತರಗೊoಡು ಕಾಡಿನ ಮದ್ಯೆ ಇರುವುದರಿಂದ ಜನ ಸಾಮಾನ್ಯರಿಗೆ ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ದೂರು ನೀಡಲು ತೊಂದರೆಯಾಗುತ್ತಿದೆ. ದಾರಿದೀಪಗಳು ಸರಿಯಾಗಿ ಇರುವುದಿಲ್ಲ. ತುರ್ತು ದೂರು ನೀಡಲು ಕಷ್ಟವಾಗಿದೆ ಹಾಗೂ ಹೆಬ್ರಿ ನಗರದಲ್ಲಿ ಮೋಟಾರು ವಾಹನ ಚಾಲಕರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರುವುದು ಸಾಮಾನ್ಯವಾಗಿದೆ. ಇದನ್ನು ಕಡಿವಾಣ ಹಾಕಲು ಈ ಮೊದಲು ಇದ್ದ ಪೊಲೀಸ್ ಠಾಣೆಯಲ್ಲಿ ತೆರೆಯಬೇಕು ಎಂಬ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಇದು ಸರ್ಕಾರ ಮಟ್ಟದಲ್ಲಿ ಆಗಬೇಕಾಗಿರುವುದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದರು.

ಪ್ರಗತಿಪರ ನಾಗರಿಕ ಸೇವಾ ವೇದಿಕೆಯು ನೂತನವಾಗಿ ರಚನೆಯಾಗಿರುವ ತಾಲೂಕಿಗೆ ಕೆಲವು ತಾಲೂಕು ಮಟ್ಟದ ಕಚೇರಿಗಳು, ನ್ಯಾಯಾಲಯ, ಸಬ್ ರಿಜಿಸ್ಟರ್, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ತಾಲೂಕು ಆಸ್ಪತ್ರೆಯನ್ನಾಗಿಸಬೇಕು ಎಂಬ ಮನವಿಗೆ ಈಗಾಗಲೇ ಕೆಲವು ಸರ್ಕಾರದ ಹಂತದಲ್ಲಿ ಪ್ರಸ್ತಾವನೆ ಇದ್ದು, ಈ ಕಾರ್ಯ ಪ್ರಗತಿಯಲ್ಲಿದ್ದು, ಈ ಬಗ್ಗೆ ಶೀಘ್ರದಲ್ಲೇ ಕಲ್ಪಿಸಲು ಇನ್ನೊಮ್ಮೆ ಪತ್ರ ಬರೆಯಲಾಗುವುದು ಹಾಗೂ ಪ್ರಸ್ತಾವನೆಗಳು ಹೊಸದಾಗಿ ಹೋಗುವುದಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲು ಸಂಬಂಧಪಟ್ಟ ಇಲಾಖೆಯ ಅದಿಕಾರಿಗಳಿಗೆ ಸೂಚನೆ ನೀಡಿದರು.

ಚಾರಾ ಗ್ರಾಮದ ಹಿರಿಯಣ್ಣ ಶೆಟ್ಟಿ ಯವರು ಕೃಷಿ ಸಾಲ ಅಡಮಾನ ಪತ್ರ ನೋಂದಾವಣೆಗೆ ಕಾವೇರಿ ತಂತ್ರಾoಶದಲ್ಲಿ ನಮೂನೆ 11 ಇ ನಕಾಶೆ ಅವಶ್ಯಕತೆ ಇದೆ ಎಂದು ತಪ್ಪಾಗಿ ಇಂಧೀಕರಣ ಮಾಡಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ನಾನು ನನ್ನ ಕೃಷಿ ಅಭಿವೃದ್ಧಿಗೆ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಿAದ ನನ್ನ ಹಕ್ಕಿನ ಕೃಷಿ ಆಸ್ತಿಗಳ ಜವಾಬ್ದಾರಿಯಿದ ಪಡೆದಿರುವ ಸಾಲದ ಮರು ಪತ್ರವನ್ನು ಕೂಡಲೇ ಬ್ರಹ್ಮಾವರ ಸಬ್ ರಿಜಿಸ್ಟರ್ ಆಫೀಸಿನಲ್ಲಿ ನೋಂದಾಯಿಸಿಕೊಡುವAತೆ ಸಲ್ಲಿಸಿದ ಅರ್ಜಿಗೆ ಜಿಲ್ಲಾಧಿಕಾರಿಗಳು ಭೂ ದಾಖಲೆಗಳ ಅಧಿಕಾರಿಗಳಿಗೆ ಪರಿಶೀಲಿಸಿ, ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದರು. ಮನೆಗಳು ಹಾಗೂ ಜಮೀನಿಗೆ ಹೋಗಲು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕೆಂದು ಬಂದAತಹ ಅಹವಾಲುಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಹಲವು ವರ್ಷಗಳಿಂದ ರಸ್ತೆಗಳಿದ್ದಲ್ಲಿ ನಿಯಮಾನುಸಾರ ರಸ್ತೆ ಮಾಡಿಕೊಡಲು ಮುಂದಾಗಬೇಕು. ಒಂದೊಮ್ಮೆ ಖಾಸಗಿ ವ್ಯಕ್ತಿಗಳ ಜಾಗ ಇದ್ದಲ್ಲಿ ಅವರೊಂದಿಗೆ ಸೌಹರ್ದಯುತವಾಗಿ ಅನುಮತಿ ಪಡೆದು ರಸ್ತೆ ನಿರ್ಮಾಣ ಮಾಡಬೇಕು. ಅದು ಸಾಧ್ಯವಾಗದೇ ಇದ್ದಲ್ಲಿ ಅರ್ಜಿದಾರರು ಈಸ್‌ಮೆಂಟ್ ಆಕ್ಟ್ ಅನ್ವಯ ನ್ಯಾಯಾಲಯಕ್ಕೆ ಹೋಗಬಹುದಾಗಿದೆ ಎಂದರು.

ಜನಸ್ಪಂದನ ಕಾರ್ಯಕ್ರಮದಲ್ಲಿ ಇಲಾಖಾವಾರು ಒಟ್ಟು 45 ಅರ್ಜಿಗಳು ಸ್ವೀಕೃತವಾಗಿದ್ದು, ಪೊಲೀಸ್ ಇಲಾಖೆಯ 01, ಆರೋಗ್ಯ ಇಲಾಖೆ-1, ಅರಣ್ಯ ಇಲಾಖೆ-2, ಸರ್ವೇ ಇಲಾಖೆ-2, ಕಂದಾಯ ಇಲಾಖೆ-17, ಕೃಷಿ / ತೊಟಗಾರಿಕೆ ಇಲಾಖೆ-3. ಸಾರಿಗೆ ಇಲಾಖೆ-7, ಆಹಾರ ಇಲಾಖೆ-2, ನೋಂದಣಿ ಇಲಾಖೆ-1, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-1, ಲೋಕೋಪಯೋಗಿ/ ಮೆಸ್ಕಾಂ-2, ಮೆಸ್ಕಾಂ/ ಸರ್ವೇ ಇಲಾಖೆ-1, ಪಂಚಾಯತ್ ರಾಜ್ ಇಲಾಖೆ-3, ಜಿಲ್ಲಾ ನಿಬಂಧಕರು, ಸಹಕಾರ ಇಲಾಖೆ-1, ಸಾರಿಗೆ/ ಕಂದಾಯ ಇಲಾಖೆ-1 ಅರ್ಜಿಗಳು ಸ್ವೀಕೃತವಾದವು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್‌ಪಿ ಡಾ. ಅರುಣ್ ಕೆ, ಸಹಾಯಕ ಕಮೀಷನರ್ ರಶ್ಮಿ, ತಹಶೀಲ್ದಾರ್ ಪ್ರಸಾದ್, ತಾಲೂಕು ಪಂಚಾಯತ್ ಇ.ಓ ಶಶಿಧರ್ ಕೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.